ಗಲ್ವಾನ್ ಬಳಿಕ ಅರುಣಾಚಲ ಪ್ರದೇಶ ಗಡಿಯಲ್ಲಿ ಭಾರತ - ಚೀನೀ ಸೈನಿಕರ ನಡುವೆ ಘರ್ಷಣೆ: ಹಲವು ಯೋಧರಿಗೆ ಗಾಯ
![ಗಲ್ವಾನ್ ಬಳಿಕ ಅರುಣಾಚಲ ಪ್ರದೇಶ ಗಡಿಯಲ್ಲಿ ಭಾರತ - ಚೀನೀ ಸೈನಿಕರ ನಡುವೆ ಘರ್ಷಣೆ: ಹಲವು ಯೋಧರಿಗೆ ಗಾಯ ಗಲ್ವಾನ್ ಬಳಿಕ ಅರುಣಾಚಲ ಪ್ರದೇಶ ಗಡಿಯಲ್ಲಿ ಭಾರತ - ಚೀನೀ ಸೈನಿಕರ ನಡುವೆ ಘರ್ಷಣೆ: ಹಲವು ಯೋಧರಿಗೆ ಗಾಯ](https://www.varthabharati.in/sites/default/files/images/articles/2022/12/12/359842-1670855861.jpg)
ಹೊಸದಿಲ್ಲಿ: ಕಳೆದ ವಾರ ಅರುಣಾಚಲ ಪ್ರದೇಶದ ಎಲ್ಎಸಿಯಲ್ಲಿ ಭಾರತ ಮತ್ತು ಚೀನಾದ ಸೈನಿಕರು ಮುಖಾಮುಖಿ ಘರ್ಷಣೆಗೆ ಒಳಗಾಗಿದ್ದರು ಎಂದು ಸರ್ಕಾರಿ ಮೂಲಗಳು ಇಂದು ತಿಳಿಸಿವೆ ಎಂದು ANI ವರದಿ ಮಾಡಿದೆ.
ಘರ್ಷಣೆಯಲ್ಲಿ ಎರಡೂ ಪಡೆಗಳ ಕೆಲವು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಎರಡು ಕಡೆಯ ಪಡೆಗಳು ಘಟನಾಸ್ಥಳದಿಂದ ನಿರ್ಗಮಿಸಿವೆ ಎಂದು ವರದಿಯಾಗಿವೆ.
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಚೀನೀ ಸೈನಿಕರು LAC ಗೆ ಪ್ರವೇಶಿಸಿದ್ದು, ಇದನ್ನು ಭಾರತೀಯ ಸೈನಿಕರು ಶಕ್ತಿಯುತವಾಗಿ ತಡೆದರು ಎಂದು ಮೂಲಗಳು ತಿಳಿಸಿದೆ.
Next Story