ಇಸ್ಪೀಟ್ ಜುಗಾರಿ: ಐವರ ಬಂಧನ

ಕುಂದಾಪುರ: ಕುಂಬಾಶಿ ಗ್ರಾಮದ ವಕ್ವಾಡಿ ಹೋಗುವ ರಸ್ತೆಯ ಬಳಿ ಕುಂಭಾಶಿ ದೇವಸ್ಥಾನದ ಹಿಂಬದಿ ಡಿ.10ರಂದು ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಐವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಮುರಳೀಧರ ಪೈ, ಕೆ.ರತ್ನಾಕರ ನಾಯಕ್, ರಜನ್ ಕುಮಾರ್, ಎಲ್ಸನ್ ಆಂಟನಿ, ಸಂತೋಷ ಕುಮಾರ್ ಬಂಧಿತ ಆರೋಪಿಗಳು. ಇವರಿಂದ 1,20,500ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story