ಜೆಡಿಎಸ್ ಪಂಚರತ್ನ ಯಾತ್ರೆಯ ಪ್ರಚಾರ ಜಾಥಕ್ಕೆ ಚಾಲನೆ

ಮಂಗಳೂರು, ಡಿ.12: ರಾಜ್ಯದಲ್ಲಿ ಪಂಚರತ್ನ ರಥ ಯಾತ್ರೆಯ ಪೂರ್ವ ತಯಾರಿಯಾಗಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಪ್ರಚಾರ ಜಾಥಾಕ್ಕೆ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಕದ್ರಿ ಶ್ರೀ ಮಂಜುನಾಥ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಸೋಮವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗು ವುದು ನಿಶ್ಚಿತ. ಅವರ ಜಲಧಾರೆ ಹಾಗೂ ಪಂಚ ರತ್ನ ಯೋಜನೆ ಈ ರಾಜ್ಯದ ನವನಿರ್ಮಾಣದ ಕಲ್ಪನೆಯಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಸಂಪೂರ್ಣ ಬೆಂಬಲ ದೊರಕುತ್ತಿದೆ. ದಕ್ಷಿಣ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾಗಿ ಸುಮತಿ ಹೆಗ್ಡೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ವಿಧಾನಸಭಾ ಕ್ಷೇತ್ರ ಅಧ್ಯಕ್ಷೆ ಹಾಗೂ ನಿಯೋಜಿತ ಅಭ್ಯರ್ಥಿ ಸುಮತಿ ಹೆಗ್ಡೆ ಮಾತನಾಡಿ ಕುಮಾರಸ್ವಾಮಿಯ ಸೂಚನೆಯ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿಧಾನಸಭಾ ಕ್ಷೇತ್ರದ 38 ವಾರ್ಡ್‌ಗಳಲಿ ಪ್ರಚಾರ ಜಾಥ ಸಂಚರಿಸಲಿದೆ. ಹಾಗೂ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಭೇಟಿ ನೀಡಲಿದೆ ಎಂದು ಹೇಳಿದರು.
ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ, ರಾಜ್ಯ ಜೆಡಿಎಸ್ ನಾಯಕರಾದ ರತ್ನಾಕರ ಸುವರ್ಣ, ಜಮೀರ್ ಷಾ, ಇಕ್ಬಾಲ್ ಮುಲ್ಕಿ, ದಿನಕರ್ ಉಳ್ಳಾಲ್, ಕಡಬ ಕ್ಷೇತ್ರದ ಅಧ್ಯಕ್ಷ ಮೀರಾ ಸಾಹೇಬ್, ಯುವ ನಾಯಕ ಫೈಝಲ್ ಮಾತನಾಡಿದರು.
ಪಕ್ಷದ ಮುಖಂಡರಾದ ಕನಕದಾಸ ಕೂಳೂರ್, ಮುನೀರ್ ಮುಕ್ಕಚೇರಿ, ವಿನ್ಸೆಂಟ್ ಕೋಡಿಕಲ್, ಅಲ್ತಾಫ್ ತುಂಬೆ, ರವೀಂದ್ರ ಉಳ್ಳಾಲ, ವೀಣಾ ಶೆಟ್ಟಿ, ಭಾರತೀ ಪುಷ್ಪರಾಜನ್, ಪ್ರಿಯಾ ಸಾಲಿಯಾನ್, ಕವೀತಾ ಜೋಹರ್, ಬಶೀರ್ ಬೇಗಂ, ಲತೀಫ್ ವಳಚಿಲ್, ಎಚ್.ಕೆ. ಚಂದ್ರಶೇಖರ್, ಸುಮೀತ್ ಸುವರ್ಣ, ನಾಸಿರ್ ಬೆಂಗ್ರೆ, ರಾಶ್ ಬ್ಯಾರಿ, ನೀಲಂ, ಬಸವರಾಜ್, ಮನೋಜ್, ಜಾವೇದ್ ನಜೀರ್, ಯುವ ಜನತಾದಳ ವಿದ್ಯಾರ್ಥಿ ಅಧ್ಯಕ್ಷ ಬಿಲಾಲ್ ಮುಹಮದ್ ಉಪಸ್ಥಿತರಿದ್ದರು.