ಡಿ.13: ಮೇಲಂಗಡಿಯಲ್ಲಿ ಮದನೀಯಂ ಮಜ್ಲಿಸ್

ಮಂಗಳೂರು, ಡಿ.12: ಉಳ್ಳಾಲದ ಮೇಲಂಗಡಿಯ ಎಸ್‌ವೈಎಸ್-ಎಸೆಸ್ಸೆಫ್ ವತಿಯಿಂದ ಉಳ್ಳಾಲ ದಗಾ ಮುಖ್ಯ ರಸ್ತೆಯ ಬಿಸ್ಮಿಲ್ಲಾ ಕಾಂಪೌಂಡ್‌ನಲ್ಲಿ ನಡೆಯುತ್ತಿರುವ ‘ಆತ್ಮೀಯ ಸಮಾಗಮ’ದಲ್ಲಿ ಡಿ.13ರಂದು ಮಗ್ರಿಬ್ ನಮಾಝ್ ಬಳಿಕ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ನೇತೃತ್ವದಲ್ಲಿ ಮದನೀಯಂ ಮಜ್ಲಿಸ್ ಕಾರ್ಯಕ್ರಮ ಜರಗಲಿದೆ.
ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಸೈಯದ್ ಜಲಾಲ್ ತಂಙಳ್, ಸೈಯದ್ ಝಿಯಾದ್ ತಂಙಳ್, ಸೈಯದ್ ಖುಬೈಬ್ ತಂಙಳ್, ಸೈಯದ್ ಕೋಯಮ್ಮ ತಂಙಳ್ ಪಾಂಡೇಲ್ ಪಕ್ಕ, ಸೈಯದ್ ಜವಾದ್ ತಂಙಳ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story