ಡಿ.16ರಂದು ಮಂಗಳೂರು ಮಹಾನಗರ ಪಾಲಿಕೆಯ ಕೆಲವೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯ

ಸುರತ್ಕಲ್, ಡಿ.12: ಮಂಗಳೂರು ಮಹಾನಗರ ಪಾಲಿಕೆಯ ಕೆಲವೆಡೆ ಡಿ.16ರ ಶುಕ್ರವಾರ ಬೆಳಗ್ಗೆ 6ರಿಂದ ಡಿ.17ರ ಬೆಳಗ್ಗೆ 6ರ ವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮನಪಾ ಕಾರ್ಯಪಾಲಕ ಅಭಿಯಂತರರು, ತುಂಬೆ ಎಚ್.ಎಲ್.ಪಿ.ಎಸ್1-18MGD ರೇಚಕ ಸ್ಥಾವರದಿಂದ ಪಣಂಬೂರಿಗೆ ನೀರು ಸರಬರಾಜು ಆಗುವ 900ವ್ಯಾಸದ ಮುಖ್ಯ ಕೊಳವೆಯು ಬಿಜೈ ಚರ್ಚ್ ರೋಡ್ ಬ್ರಿಡ್ಜ್ ಬಳಿ ಕೂಳೂರು ಸೇತುವೆ ಬಳಿ ಎಂ.ಸಿ.ಎಫ್ ಬಳಿ ನೀರು ಸೋರುವಿಕೆಯಾಗುತ್ತಿದ್ದು, ಅದರ ದುರಸ್ತಿ ಹಾಗೂ ಕೆಯುಐಡಿಎಫ್ಸಿ ವತಿಯಿಂದ ಕೊಟ್ಟಾರ ಚೌಕಿ ಬಳಿ 900ವ್ಯಾಸದ ಮುಖ್ಯ ಕೊಳವೆಯನ್ನು ಬದಲಾಯಿಸುವ ಕಾಮಗಾರಿ ನಡೆಯಲಿದೆ.
ಈ ಹಿನ್ಲೆಯಲ್ಲಿ ಡಿ.16ರ ಶುಕ್ರವಾರ ಬೆಳಗ್ಗೆ 6ರಿಂದ ಡಿ.17ರ ಶನಿವಾಋ ಬೆಳಗ್ಗೆ 6ರ ವರೆಗೆ ಸುರತ್ಕಲ್ ಪಣಂಬೂರು, ಕುಳಾಯಿ, ಕಾನ, ಬಾಳಾ, ಮುಂಚೂರು, ಕಾಟಿಪಳ್ಳ, ಎನ್.ಐ.ಟಿ.ಕೆ ಸಸಿಹಿತ್ತು, ಕೂಳೂರು, ಕೊಟ್ಟಾರ ಇತ್ಯಾದಿ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುವುದು. ಹಾಗಾಗಿ ಈ ಭಾಗಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಸಾರ್ವಜನಿಕರು ಸಹಕರಿಸಬೇಕೆಂಧು ಮನವಿ ಮಾಡಿದ್ದಾರೆ.