ಉಪ್ಪಿನಂಗಡಿ: ಟ್ರ್ಯಾಕ್ಟರ್‌ಗೆ ಕಂಟೈನರ್ ಲಾರಿ ಢಿಕ್ಕಿ; ಚಾಲಕನಿಗೆ ಗಾಯ

ಉಪ್ಪಿನಂಗಡಿ: ಓವರ್‌ಟೇಕ್ ಮಾಡುವ ಭರದಲ್ಲಿ ಕಂಟೈನರ್ ಲಾರಿಯೊಂದು ಟ್ರ್ಯಾಕ್ಟರ್‌ಗೆ ಢಿಕ್ಕಿ ಹೊಡೆದಿದ್ದು, ಇದರಿಂದಾಗಿ ಟ್ರ್ಯಾಕ್ಟರ್‌ನ ಹಿಂಬದಿಯ ಟ್ರಾಲಿ ಮಗುಚಿ ಬಿದ್ದ ಘಟನೆ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ಮಂಗಳವಾರ ಸಂಜೆ ಸಂಭವಿಸಿದೆ.
ಘಟನೆಯಿಂದ ಟ್ರ್ಯಾಕ್ಟರ್ ಚಾಲಕ ಗಾಯಗೊಂಡಿದ್ದಾರೆ.
ನೆಲ್ಯಾಡಿ ಕಡೆಯಿಂದ ಬಿ.ಸಿ.ರೋಡು ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಅದೇ ಮಾರ್ಗವಾಗಿ ಹೋಗುತ್ತಿದ್ದ ಟ್ರ್ಯಾಕ್ಟರ್ ಅನ್ನು ಗಾಂಧಿಪಾರ್ಕ್ ಬಳಿ ಓವರ್‌ಟೇಕ್ ಮಾಡಿದ್ದು, ಈ ವೇಳೆ ಟ್ರ್ಯಾಕ್ಟರ್‌ಗೆ ಕಂಟೈನರ್ ಲಾರಿ ಢಿಕ್ಕಿ ಹೊಡೆದಿದೆ.
ಘಟನೆಯಿಂದ ಟ್ರ್ಯಾಕ್ಟರ್‌ನ ಎಂಜಿನ್‍ನ ಭಾಗ ರಸ್ತೆಯಲ್ಲಿ ನೇರವಾಗಿ ನಿಂತಿದ್ದರೆ, ಅದರ ಹಿಂದಿನ ಟ್ರಾಲಿ ಪಲ್ಟಿಯಾಗಿತ್ತು. ಅಪಘಾತದಿಂದಾಗಿ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತು. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story