‘ಮೊಳಹಳ್ಳಿ ಕಂಬಳ ಮಹೋತ್ಸವ’ ಸಂಪನ್ನ

ಕುಂದಾಪುರ, ಡಿ.13: ಸುಮಾರು 200 ವರ್ಷಗಳ ಇತಿಹಾಸವಿರುವ ಮೊಳಹಳ್ಳಿ ಒಂಬತ್ತು ಮನೆಯವರು ಹಾಗೂ ಗ್ರಾಮಸ್ಥರು ನಡೆಸುವ ಪ್ರಸಿದ್ಧ ’ಮೊಳಹಳ್ಳಿ ಕಂಬಳ ಮಹೋತ್ಸವ’ ಸೋಮವಾರ ಹೊನಲು-ಬೆಳಕಿನಲ್ಲಿ ಸಂಪನ್ನಗೊಂಡಿತು.
ಮಳೆಯ ನಡುವೆಯೂ ಕಂಬಳ ವೀಕ್ಷಣೆಗಾಗಿ ಸಾವಿರಾರು ಮಂದಿ ಆಗಮಿಸಿ ಈ ಅದ್ದೂರಿ ಕಂಬಳವನ್ನು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಒಂಬತ್ತು ಮನೆಯ ಪ್ರಮುಖರಾದ ನಾರಾಯಣ ಶೆಟ್ಟಿ, ವಿಜಯಾನಂದ ಶೆಟ್ಟಿ, ಮಹೇಶ್ ಕುಮಾರ್ ಹೆಗ್ಡೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಮಾಜಿ ತಾಪಂ ಸದಸ್ಯ ಪ್ರದೀಪ್ ಕುಮಾರ್, ಮೊಳಹಳ್ಳಿ ಗ್ರಾಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ, ಸದಸ್ಯ ಮನೋಜ್ ಕುಮಾರ್ ಶೆಟ್ಟಿ, ಬೈಂದೂರು ಕಂಬಳ ಸಮಿತಿಯ ಅಧ್ಯಕ್ಷ ವೆಂಕಟ ಪೂಜಾರಿ, ಪಿಡಬ್ಲ್ಯೂಡಿ ಗುತ್ತಿಗೆದಾರ ಚಂದ್ರಶೇಖರ್ ಶೆಟ್ಟಿ ಮೊಳಹಳ್ಳಿ ಉಪಸ್ಥಿತರಿದ್ದರು.
ಹಗ್ಗ ಮತ್ತು ಹಲಗೆ ವಿಭಾಗದಲ್ಲಿ ಕಿರಿಯ ಹಾಗೂ ಹಿರಿಯ ಎಂದು ಸ್ಪರ್ಧೆಗಳ ಏರ್ಪಡಿಸಲಾಗಿದ್ದು ಇದರಲ್ಲಿ ಪ್ರಥಮ ಮತ್ತು ದ್ವಿತೀಯ ವಿಭಾಗದಲ್ಲಿ ಆಯ್ಕೆ ಮಾಡಲಾಗಿದ್ದು ೪೦ಕ್ಕೂ ಅಧಿಕ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.





