ರಾಷ್ಟ್ರಮಟ್ಟದ ಕರಾಟೆ: ತನೀಷ್ ಕುಮಾರ್‌ಗೆ ಬೆಳ್ಳಿ ಪದಕ

ಕಾರ್ಕಳ: ಉಡುಪಿ ಜಿಲ್ಲೆಯ ಬೈಂದೂರಿನ ಯಡ್ತರೆ ಜೆ ಎನ್ ಆರ್ ಕಲಾಮಂದಿರದಲ್ಲಿ ನಡೆದ ರಾಷ್ಟ್ರಮಟ್ಟದ ರೈನ್ಬೋ ಬುಡಾಕಾನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ತನೀಷ್ ಕುಮಾರ್ ಫೈಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.
ತನೀಷ್ ಕುಮಾರ್ ಅವರು ಕಾರ್ಕಳ ತಾಲೂಕು ಮುಂಡ್ಕೂರಿನ ಲತಾ ಉದಯ್ ಕುಮಾರ್ ದಂಪತಿಯ ಪುತ್ರ ಹಾಗೂ ಮುಂಡ್ಕೂರು ಶಾಖೆಯ ಕರಾಟೆ ತರಬೇತಿ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು, ರಂಜಿತ್ ಸಫಳಿಗ ಹಾಗೂ ಮುಖ್ಯ ಶಿಕ್ಷಕ ಸತೀಶ್ ಬೆಳ್ಮಣ್ ಅವರಿಂದ ಕರಾಟೆ ತರಬೇತಿಯನ್ನು ಪಡೆದಿರುತ್ತಾನೆ.
Next Story





