ಭಾರತ-ಚೀನಾ ಯೋಧರ ನಡುವೆ ಘರ್ಷಣೆ: ಚೀನಾ ಪ್ರತಿಕ್ರಿಯಿಸಿದ್ದು ಹೀಗೆ …

ಬೀಜಿಂಗ್ : ಅರುಣಾಚಲ ಪ್ರದೇಶ(Arunachal Pradesh)ದಲ್ಲಿ ಭಾರತ-ಚೀನಾ ಯೋಧರ ನಡುವೆ ನಡೆದ ಘರ್ಷಣೆಗಳ ಕುರಿತು ಯಾವುದೇ ಪ್ರತಿಕ್ರಿಯೆ ನೀಡದ ಚೀನಾ, ಗಡಿಯಲ್ಲಿ ಸ್ಥಿತಿ ಸಾಮಾನ್ಯವಾಗಿ ಸ್ಥಿರವಾಗಿದೆ ಎಂದು ಹೇಳಿಕೊಂಡಿದೆ.
‘ನಮಗೆ ತಿಳಿದಿರುವಂತೆ ಚೀನಾ-ಭಾರತ ಗಡಿಯಲ್ಲಿ ಸ್ಥಿತಿಯು ಒಟ್ಟಾರೆ ಸ್ಥಿರವಾಗಿದೆ. ಉಭಯ ದೇಶಗಳು ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಗಡಿ ವಿವಾದ ಕುರಿತು ಮಾತುಕತೆಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಸಿಕೊಂಡು ಬಂದಿವೆ. ಚೀನಾದ ದಾರಿಯಲ್ಲಿಯೇ ಭಾರತವೂ ಸಾಗುತ್ತದೆ ಎಂದು ನಾವು ಆಶಿಸಿದ್ದೇವೆ ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್(Wang Wenbin) ಮಂಗಳವಾರ ಬೀಜಿಂಗ್‌ನಲ್ಲಿ ಹೇಳಿದರು.
Next Story





