ಶಿವಮೊಗ್ಗ | 'ಇಂಡಿಯಾ ಸೈಬರ್ ಕಾಪ್ ಆಫ್ ಇಯರ್' ಪ್ರಶಸ್ತಿ; ಇನ್‌ಸ್ಪೆಕ್ಟರ್ ಕೆ.ಟಿ ಗುರುರಾಜ್ ಗೆ ಸ್ಥಾನ

ಶಿವಮೊಗ್ಗ, ಡಿ.13: 'ಇಂಡಿಯಾ ಸೈಬರ್ ಕಾಪ್ ಆಫ್ ಇಯರ್' ಪ್ರಶಸ್ತಿಯ ಪಟ್ಟಿಯಲ್ಲಿ ಶಿವಮೊಗ್ಗ ಕ್ರೈಂ ಠಾಣೆಯ ಹಿಂದಿನ ಇನ್‌ಸ್ಪೆಕ್ಟರ್ ಕೆ.ಟಿ ಗುರುರಾಜ್ ಸ್ಥಾನಪಡೆದಿದ್ದಾರೆ.
ಸೈಬರ್ ಕ್ರೈಂ ವಿಭಾಗದಲ್ಲಿ ಕ್ಲಿಷ್ಟಕರ ಪ್ರಕರಣವನ್ನು ಅತ್ಯುತ್ತಮವಾಗಿ ಭೇದಿಸಿದ ತನಿಖಾಧಿಕಾರಿಗಳಿಗೆ ಇಂಡಿಯಾಸ್ ಸೈಬರ್ ಕಾಪ್ ಆಫ್ ಪ್ರಶಸ್ತಿ ನೀಡಲಾಗುತ್ತದೆ. ಈ ವರ್ಷದ ಪ್ರಶಸ್ತಿಗೆ ಶಿವಮೊಗ್ಗ ಸೈಬರ್ ಠಾಣೆಯಲ್ಲಿ ತನಿಖಾಧಿಕಾರಿಯಾಗಿ ಕೆಲಸ ಮಾಡಿ ಅನೇಕ ಪ್ರಕರಣಗಳನ್ನು ಭೇದಿಸಿದ್ದ ಕೆ.ಟಿ ಗುರುರಾಜ್ ನಾಮನಿರ್ದೇಶನಗೊಂಡಿದ್ದಾರೆ.
ಈಡೀ ದೇಶವೇ ಶಿವಮೊಗ್ಗದ ಕಡೆ ನೋಡುವಂತೆ ಮಾಡಿದ್ದ ಹುಣಸೋಡು ಸ್ಪೋಟ ಪ್ರಕರಣ,ಹರ್ಷ ಕೊಲೆ, ಫ್ಲೆಕ್ಸ್ ಗಲಾಟೆ,ಶಂಕಿತ ಉಗ್ರರ ಕೇಸ್ ಸೇರಿದಂತೆ ಹಲವು ಕಿಷ್ಟಕರ ಕೇಸ್‌ಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಶಸ್ತಿ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಗೊಂಡಿದೆ.
ಸೈಬರ್ ಟಿಪ್ ಕೇಸ್: ಇನ್ನೂ ಶಿಕ್ಷಕನೊಬ್ಬ ಮಕ್ಕಳ ವಿಡಿಯೋವನ್ನು ಅಶ್ಲೀಲ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುತ್ತಿದ್ದ ಕೇಸ್‌ವೊಂದಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಸೈಬರ್ ಟಿಪ್ ಸಂಸ್ಥೆ ನೀಡಿದ ಮಾಹಿತಿ ಅನ್ವಯ ಪ್ರಕರಣವನ್ನು ಭೇದಿಸಿ ಆರೋಪಿ ಶಿಕ್ಷೆಯಾಗುವಲ್ಲಿ ಶ್ರಮಿಸಿದ್ದರು ಈ ಇನ್‌ಸ್ಪೆಕ್ಟರ್ ಗುರುರಾಜ್. ಇದೇ ಸಂದರ್ಭದಲ್ಲಿಯೇ ಆರು ಅಪ್ರಾಪ್ತ ಬಾಲಕರನ್ನು ರಕ್ಷಣೆಯನ್ನು ಸಹ ಮಾಡಿದ್ದರು.
ಗುರುರಾಜ್ ಜತೆಯಲ್ಲಿ ಮಧ್ಯಪ್ರದೇಶ ಭೂಪಾಲ್‌ನ ಸೈಬರ್ ಆಂಡ್ ಹೈಟೆಕ್ ಪೊಲೀಸ್ ಸ್ಟೇಷನ್ ಇನ್‌ಸ್ಪೆಕ್ಟರ್ ನೀತೂ ಕನಸರಿಯಾ ಹಾಗೂ ಮುಂಬೈನ ವೆಸ್ಟ್ ರೀಜನ್ ಸೈಬರ್ ಪೊಲೀಸ್ ಸ್ಟೇಷನ್‌ನ ಇನ್‌ಸ್ಪೆಕ್ಟರ್ ಸುವರ್ಣ ಶಿಂಧೆ ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.







