ಭಟ್ಕಳ: ವಿಶೇಷ ಚೇತನ ಮಕ್ಕಳ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ: ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಭಟ್ಕಳ ಜಂಟಿಯಾಗಿ ಆಯೋಜಿಸಿದ್ದ 1 ರಿಂದ 10ನೇ ತರಗತಿಯ ಭಟ್ಕಳ ತಾಲೂಕು ವಿಶೇಷ ಚೇತನ ಮಕ್ಕಳ ಉಚಿತ ವೈದ್ಯಕೀಯ ಮೌಲ್ಯಾಂಕನ ಶಿಬಿರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರಾಲಿಯಲ್ಲಿ ಮಂಗಳವಾರ ಯಶಸ್ವಿಯಾಗಿ ಜರಗಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸುನಿಲ್ ನಾಯ್ಕ, ಮಕ್ಕಳೊಂದಿಗೆ ಭಾವನಾತ್ಮಕ ಸಂಬಂಧ ಗಟ್ಟಿಗೊಳಿಸಿ ಮನೋಸ್ಥೈರ್ಯ ಹೆಚ್ಚಿಸಿ ಅವರನ್ನು ಎಲ್ಲ ರಂಗದಲ್ಲಿ ಸಾಧನೆ ಮಾಡುವಂತೆ ಸನ್ನದ್ಧಗೊಳಿಸಬೇಕು, ಇದಕ್ಕಾಗಿ ತಾನು ಎಲ್ಲ ರೀತಿಯ ಸಹಾಯ ಸಹಕಾರ ನೀಡಲು ಬದ್ಧ ಎಂದು ಹೇಳಿದರು.
ಪಶ್ವಿಮಘಟ್ಟ ಅರಣ್ಯ ಸಂರಕ್ಷಣೆಗಳ ಕಾರ್ಯಪಡೆ ಸಮಿತಿ ಅಧ್ಯಕ್ಷ ಗೋವಿಂದ್ ನಾಯ್ಕ ಹನುಮಾನ್ ನಗರ, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ಡಾ.ಸತೀಶ್ ಬಿ, ಡಾ. ಜನಾರ್ಧನ ಮೊಗೇರ್, ಡಾ.ವಸಂತ್ ಕುಮಾರ್, ಮೋಹನ್ ನಾಯ್ಕ, ಉಲ್ಲಾಸ್ ನಾಯ್ಕ, ಎಂ.ಎನ್.ನಾಯ್ಕ, ರವೀಂದ್ರ ನಾಯ್ಕ, ಗೋಪಾಲ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಭಟ್ಕಳ ಕ್ಷೇತ್ರಶಿಕ್ಷಣಾಧಿಕಾರಿ ದೇವಿದಾಸ್ ಮೊಗೇರ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸುರೇಶ್ ಮರುಢೇಶ್ವರ್ ಕಾರ್ಯಕ್ರಮ ನಿರೂಪಿಸಿದರು. ವನಿತಾ ಎಚ್. ಧನ್ಯವಾದ ಅರ್ಪಿಸಿದರು.
ಈ ಶಿಬಿರದಲ್ಲಿ ಸುಮಾರು 125 ವಿಶೇಷ ಚೇತನ ಮಕ್ಕಳಿಗೆ ತಪಾಸಣೆ ನಡೆಸಿ ವಿವಿಧ ಸಾಧನ ಸಲಕರಣೆಗಳಿಗೆ ಶಿಫಾರಸ್ಸು ಮಾಡಲಾಯಿತು.







