ಬಂಡೀಪುರ: ಲಾರಿ ಢಿಕ್ಕಿಯಾಗಿ ಆನೆ ಸಾವು
![ಬಂಡೀಪುರ: ಲಾರಿ ಢಿಕ್ಕಿಯಾಗಿ ಆನೆ ಸಾವು ಬಂಡೀಪುರ: ಲಾರಿ ಢಿಕ್ಕಿಯಾಗಿ ಆನೆ ಸಾವು](https://www.varthabharati.in/sites/default/files/images/articles/2022/12/14/360047-1670990702.jpg)
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಲಾರಿ ಢಿಕ್ಕಿಯಾಗಿ ಹೆಣ್ಣಾನೆಯೊಂದು ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ವರದಿಯಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಲಾರಿ ಢಿಕ್ಕಿ ಹೊಡೆದು ಹೆಣ್ಣಾನೆಯೊಂದು ಮಂಗಳವಾರ ರಾತ್ರಿ ಮೃತಪಟ್ಟಿದೆ. ಕೇರಳ ಕಡೆಯಿಂದ ಬರುತ್ತಿದ್ದ ತಮಿಳುನಾಡು ನೋಂದಣಿಯ ಲಾರಿ ಆನೆಗೆ ಡಿಕ್ಕಿ ಹೊಡೆದಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಅಪಘಾತದ ಲಾರಿಯನ್ನು ಅರಣ್ಯಾಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಗುಬ್ಬಿ: ವಿದ್ಯುತ್ ಪರಿವರ್ತಕಕ್ಕೆ ಸಿಲುಕಿ ಚಿರತೆ ಸಾವು