ಶಾಲಾ ಬಾಲಕಿಯ ಮೇಲೆ ಆ್ಯಸಿಡ್ ದಾಳಿ: ಸಂತ್ರಸ್ತೆ ಗಂಭೀರ
ಹೊಸದಿಲ್ಲಿ: ಇಂದು ನೈಋತ್ಯ ದಿಲ್ಲಿಯ ದ್ವಾರಕಾ ಪ್ರದೇಶದಲ್ಲಿ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 17 ವರ್ಷದ ಶಾಲಾ ಬಾಲಕಿಯ ಮುಖಕ್ಕೆ ಆ್ಯಸಿಡ್ ಎರಚಿದ್ದರಿಂದ ವಿದ್ಯಾರ್ಥಿನಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು NDTV ವರದಿ ಮಾಡಿದೆ.
ಮಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಬಾಲಕಿಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿಸೆರೆಯಾಗಿರುವ ಘಟನೆಯ ಆಘಾತಕಾರಿ ದೃಶ್ಯಗಳಲ್ಲಿ ಇಬ್ಬರು ಹುಡುಗಿಯರು ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೈಕ್ ನಲ್ಲಿ ನಿಧಾನವಾಗಿ ಬಂದ ಇಬ್ಬರು ಸವಾರರಲ್ಲಿ ಒಬ್ಬಾತ 17 ವರ್ಷದ ಬಾಲಕಿಯ ಮೇಲೆ ಆ್ಯಸಿಡ್ ಎಸೆದಿದ್ದಾನೆ. ನಂತರ ಬಾಲಕಿ ತೀವ್ರವಾದ ನೋವಿನಲ್ಲಿ ತನ್ನ ಮುಖವನ್ನು ಹಿಡಿದುಕೊಂಡು ಓಡುತ್ತಿರುವುದು ಕಂಡುಬಂದಿದೆ.
"ನನ್ನ ಹೆಣ್ಣುಮಕ್ಕಳು, ಒಬ್ಬಳು 17 ವರ್ಷ ಹಾಗೂ ಇನ್ನೊಬ್ಬಳು 13 ವರ್ಷ ಇಂದು ಬೆಳಿಗ್ಗೆ ಒಟ್ಟಿಗೆ ಶಾಲೆಗೆ ಹೋಗಿದ್ದರು. ಇದ್ದಕ್ಕಿದ್ದಂತೆ, ಬೈಕ್ನಲ್ಲಿ ಬಂದ ಇಬ್ಬರು ನನ್ನ ಹಿರಿಯ ಮಗಳ ಮೇಲೆ ಆ್ಯಸಿಡ್ ಎಸೆದು ಪರಾರಿಯಾದರು. ದುಷ್ಕರ್ಮಿಗಳು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು" ಎಂದು ಬಾಲಕಿಯ ತಂದೆ ಹೇಳಿದರು.
ಬಾಲಕಿ, ಇಬ್ಬರ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಅವರಲ್ಲಿ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ ಹಿರಿಯ ಪೊಲೀಸ್ ಅಧಿಕಾರಿ ಎಂ. ಹರ್ಷವರ್ಧನ್ ತಿಳಿಸಿದ್ದಾರೆ.
देश की राजधानी में दिन दहाड़े एक स्कूली बच्ची पर 2 बदमाश दबंगई से तेज़ाब फेंककर निकल जाते हैं… क्या किसी को भी अब क़ानून का डर है ? क्यों तेज़ाब पर बैन नहीं लगाया जाता ? SHAME pic.twitter.com/kaWWQYey7A
— Swati Maliwal (@SwatiJaiHind) December 14, 2022