ತೂಕ, ಅಳತೆಯಲ್ಲಿ ರೈತರಿಗೆ ಮೋಸ ಆರೋಪ: ಕಾರವಾರ ಸೇರಿ 21 ಸಕ್ಕರೆ ಕಾರ್ಖಾನೆಗಳ ಮೇಲೆ ಅಧಿಕಾರಿಗಳ ದಾಳಿ

ಬೆಂಗಳೂರು: ಕಬ್ಬು ಬೆಳೆಯುವ ರೈತರಿಂದ ತೂಕ, ಅಳತೆಯಲ್ಲಿ ಸಕ್ಕರೆ ಕಾರ್ಖಾನೆಗಳು ಮೋಸ ಮಾಡುತ್ತಿದೆ ಎನ್ನುವ ದೂರುಗಳ ಮೇರೆಗೆ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಿದ ಸಕ್ಕರೆ ಇಲಾಖೆಯ ಆಯುಕ್ತರ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ.
ಬೆಳಗಾವಿ -8 ಕಾರ್ಖಾನೆಗಳು, ಬಿಜಾಪುರ – 4, ಬಾಗಲಕೋಟೆ -4, ಬೀದರ್ – 2, ಗುಲಬರ್ಗ – 2 ಕಾರವಾರ – 1 ಕಾರ್ಖಾನೆಗೆ ದಾಳಿ ನಡೆಸಿರುವುದಾಗಿ ಸಕ್ಕರೆ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ 21 ಸಕ್ಕರೆ ಕಾರ್ಖಾನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಸಕ್ಕರೆ ಇಲಾಖೆಯ ಆಯುಕ್ತ ಶಿವಾನಂದ್ ಎಚ್. ಕಲಕೇರಿ ಇವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ವಿವಿಧ ಇಲಾಖಾ ಅಧಿಕಾರಿಗಳು ದಾಳಿಯಲ್ಲಿದ್ದರು.
Next Story