ಮಂಗಳೂರು: ಡಿ.28ರಂದು ಅತ್ಲೆಟಿಕ್ ಕ್ರೀಡಾಕೂಟ
ಮಂಗಳೂರು, ಡಿ.14: ದ.ಕ.ಜಿಲ್ಲಾ ಅತ್ಲೆಟಿಕ್ ಅಸೋಸಿಯೇಶನ್ ವತಿಯಿಂದ ಡಿ.28ರಂದು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಅತ್ಲೆಟಿಕ್ ಕ್ರೀಡಾಕೂಟವನ್ನು ಹಮ್ಮಿಕೊಂಡಿದೆ ಎಂದು ಅಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲಕ ಬಾಲಕಿಯರ 14 ಮತ್ತು 16ರ ವಯೋಮಿತಿಯಲ್ಲಿ ಸ್ಪರ್ಧೆ ನಡೆಯಲಿದ್ದುಘಿ, 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಡಿ.28ರಂದು ಬೆಳಗ್ಗೆ 9ಕ್ಕೆ ಕ್ರೀಡಾಕೂಟ ಉದ್ಘಾಟನೆಯಾಗಲಿದೆ. 3.30ಕ್ಕೆ ಸಮಾರೋಪ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳನ್ನು ಬಿಹಾರದ ಪಾಟ್ನಾದಲ್ಲಿ ನಡೆಯುವ ನ್ಯಾಶನಲ್ ಇಂಟರ್ ಡಿಸ್ಟ್ರಿಕ್ಟ್ ಜ್ಯೂನಿಯರ್ ಅತ್ಲೆಟಿಕ್ನಲ್ಲಿ ಭಾಗವಹಿಸಲಿದ್ದಾರೆ ಎಂದರು.
ಈ ಜಿಲ್ಲಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಡಿ.24ರೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು. ಎರಡು ವಿಭಾಗದಲ್ಲಿ ಕೂಡ ಈಗ ಹೊಸದಾಗಿ ಜಾವೆಲಿನ್ ಕ್ರೀಡೆಯನ್ನು ಕೂಡ ಸೇರಿಸಿಕೊಳ್ಳಲಾಗಿದೆ. ಭಾಗವಹಿಸುವ ಕ್ರೀಡಾಪಟುಗಳಿಗೆ ಎ್ಐ ಐಡಿ ಕಡ್ಡಾಯವಾಗಿದ್ದುಘಿ, ಇದನ್ನು ಸಂಘಟಕರೇ ಮಾಡಿಕೊಡಲಿದ್ದಾರೆ ಎಂದರು.
ಈ ಸಂದರ್ಭ ಕೋಶಾಧಿಕಾರಿ ಕೃಷ್ಣ ಶೆಣೈ ಹಾಗೂ ಸೇವಂತಿ ಉಪಸ್ಥಿತರಿದ್ದರು.





