ಮಂಗಳೂರು: ಡಿ.14ರಿಂದ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ

ಮಂಗಳೂರು, ಡಿ.14: ಸ್ವಸ್ತಿಕ ನ್ಯಾಷನಲ್ ಸ್ಕೂಲ್ ವತಿಯಿಂದ ನಿಟ್ಟೆ ಅಟಲ್ ಇನ್ಕೂಬೇಶನ್ ಸೆಂಟರ್, ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿ ಲ್ ಮತ್ತು ರೋಟರಿ ಮಂಗಳೂರು ಡೌನ್‍ಟೌನ್ ಸಹಯೊಗದಲ್ಲಿ ಡಿ.19 ರಿಂದ 22 ವರೆಗೆ ಬಲ್ಲಾಲ್ ಭಾಗ್‍ನ ವರ್ಟೆಕ್ಸ್ ವನ್ ನಲ್ಲಿ ಸ್ಟಾರ್ಟ್ ಅಪ್ ಮೈಂಡ್ ಸೆಟ್ ಎಂಬ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾರ್ಯಕ್ರಮ ಮುಖ್ಯ ಸಂಯೋಜಕ ಸಿಎ ಎಸ್‍ಎಸ್ ನಾಯಕ್, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಮ್ಮ ಸ್ಟಾರ್ಟ್‍ಅಪ್ ವ್ಯವಹಾರ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಮತ್ತು ಉದ್ಯಮಿಯಾಗಿಸಲು ಕಾರ್ಯಾಗಾರ ಸಹಾಯ ಮಾಡುತ್ತದೆ. ಎಂಎಎಸ್‍ಎಂಇ, ಐಇ ಕೋಡ್, ಟ್ರೇಡ್ ಲೈಸೆನ್ಸ್, ಟಿಐಎನ್ ಮತ್ತು ಹೊಸ ಉದ್ಯಮ ಪ್ರಾರಂಭಿಸಲು ಅಗತ್ಯವಿರುವ ದಾಖಲಾತಿಗಳನ್ನು ನೋಂದಣಿ ಮಾಡಲು ಕಲಿಸಲಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಡಾ.ರಾಘವೇಂದ್ರ ಹೊಳ್ಳ, ರೋಟರಿ ನಿರ್ದೇಶಕ ಶ್ರೀಕಾಂತ್ ನಾಯಕ್, ರೋಟರಿ ಸಹಾಯಕ ಗವರ್ನರ್ ಸೂರಜ್ ಹೆಬ್ಬಾರ್, ಪ್ರಾಂಶುಪಾಲೆ ಡಾ. ಮಾಲಿನಿ ಹೆಬ್ಬಾರ್ ಉಪಸ್ಥಿತರಿದ್ದರು.