ಯಡಿಯೂರಪ್ಪ ಗನ್ ಮ್ಯಾನ್ ಗಳಲ್ಲಿ ಒಬ್ಬರು ಈಡಿ ಅಧಿಕಾರಿ ಇರ್ತಾರೆ...: ಎಂ.ಲಕ್ಷ್ಮಣ್ ಆರೋಪ
ಬೆಂಗಳೂರು, ಡಿ. 14: 'ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗನ್ ಮ್ಯಾನ್ ಗಳಲ್ಲಿ ಒಬ್ಬ ಈಡಿ ಅಧಿಕಾರಿ ಇರುತ್ತಾರೆ' ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 'ಯಡಿಯೂರಪ್ಪ ಜೊತೆಯಲ್ಲಿಯೇ ಈಡಿ ಅಧಿಕಾರಿ ಇರುತ್ತಾರೆ, ಗನ್ ಮ್ಯಾನ್ ಸಮವಸ್ತ್ರದಲ್ಲಿರುವವರಲ್ಲಿ ಒಬ್ಬ ಈಡಿ ಅಧಿಕಾರಿಯಾಗಿದ್ದು,ಅವರೇ ಯಡಿಯೂರಪ್ಪ ಬಾಯಿಯಿಂದ ಹೇಳಿಕೆಗಳನ್ನ ಕೊಡಿಸ್ತಾರೆ. ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಎಲ್ಲಿಯೇ ಹೋದರೂ ಇಡಿ ಅಧಿಕಾರಿ ಜೊತೆಯಲ್ಲೇ ಇರ್ತಾರೆ' ಎಂದು ಆರೋಪಿಸಿದರು.
''ಯಡಿಯೂರಪ್ಪನವರ ಪ್ರತಿ ಭಾಷಣದಲ್ಲಿಯೂ ಅವರೇ ಇರುತ್ತಾರೆ. ಅದಕ್ಕೆ ಪಕ್ಷದ ವಿರುದ್ಧ ಯಡಿಯೂರಪ್ಪ ಏನೂ ಮಾತನಾಡಲ್ಲ'' ಎಂದು ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ: ಸಿ.ಟಿ ರವಿ ಹೆಸರಲ್ಲಿದೆ 3 ಸಾವಿರ ಕೋಟಿ ರೂ.ಬೇನಾಮಿ ಆಸ್ತಿ: ಎಂ.ಲಕ್ಷ್ಮಣ್ ಆರೋಪ
Next Story