ಅಸ್ಸಾಂನ ‘ಗಮೋಚಾ’ಕ್ಕೆ ಐಜಿ ಟ್ಯಾಗ್

ಗುವಾಹಟಿ, ಡಿ. 14: ಅಸ್ಸಾಂನ ಸಾಂಸ್ಕೃತಿಕ ಹಾಗೂ ಅಸ್ಮಿತೆಯ ಸಂಕೇತ ‘ಗಮೋಚಾ’ (ಟವಲ್)ಕ್ಕೆ ಕೇಂದ್ರ ಸರಕಾರದ ‘ಭೌಗೋಳಿಕ ಗುರುತು’ (ಜಿಐ) ಟ್ಯಾಗ್ ಅನ್ನು ನೀಡಿದೆ. ಮಂಗಳವಾರ ನೀಡಲಾದ ಐಜಿ ನೋಂದಣಿ ಪ್ರಮಾಣ ಪತ್ರವನ್ನು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ (Piyush Goyal)ಅವರು ಮಂಗಳವಾರ ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದು ಅಸ್ಸಾಂನ ಜನರಲ್ಲಿ ಸಂತಸ ತಂದಿದೆ. ‘‘ನಮ್ಮ ಗಮೋಚಾ ಕೇಂದ್ರ ಸರಕಾರದ ಭೌಗೋಳಿಕ ಗುರುತು ಪಡೆದ ದಿನ ಅಸ್ಸಾಂಗೆ ಹೆಮ್ಮೆಯ ದಿನ’’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ.
Next Story





