ಹಣ ಹೂಡಿಕೆ ಮಾಡಿಸಿ ವಂಚನೆ ಆರೋಪ: ಬಂದರು ಠಾಣೆಯಲ್ಲಿ ದೂರು ದಾಖಲು

ಮಂಗಳೂರು, ಡಿ.14: ಬಹರೈನ್‌ನ ಸಂಸ್ಥೆಯೊಂದರಲ್ಲಿ 67 ಲ.ರೂ. ಹೂಡಿಕೆ ಮಾಡಿಸಿ ಬಳಿಕ ವಂಚಿಸಿರುವ ಬಗ್ಗೆ ಬಂದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಬಹರೈನ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿ ಪರಿಚಯವಾದ ಕೇರಳದ ಕೆ.ಪಿ.ಹರಿಕುಮಾರ್ ತಾನು ನಡೆಸುತ್ತಿರುವ ಉದ್ಯಮದ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುವಂತೆ ಸೂಚಿಸಿದ್ದರು ಎನ್ನಲಾಗಿದೆ. ಅದರಂತೆ ದೂರುದಾರರು 67 ಲ.ರೂ.ವನ್ನು ಆ ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಕರಾರು ಪತ್ರಗಳನ್ನು ಕೂಡ ತಯಾರಿಸಿದ್ದರು. ಬಳಿಕ ಹರಿಕುಮಾರ್ ಹಣ ವಾಪಸ್ ನೀಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





