ಯುವತಿ ನಾಪತ್ತೆ

ಮಂಗಳೂರು, ಡಿ.14: ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ಯಾರಿಲ್ (19) ಎಂಬಾಕೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.
ಡೋಟಿ ಕ್ರಿಸ್ಟಬೇಲ್ ಸಂಥ್ವಾನ್ ಎಂಬವರ ಮೊಮ್ಮಗಳು ಕಾಣೆಯಾದ ಯುವತಿ. ಈಕೆ ನ.29ರಂದು ಮುಂಜಾನೆ 5.30ಕ್ಕೆ ತನ್ನ ಮನೆಯಲ್ಲಿ ಯಾರಿಗೂ ಹೇಳದೆ ಹೊರ ಹೋಗಿದ್ದಾಳೆ. ತಕ್ಷನ ಡೋಟಿಯು ತನ್ನ ಮಗಳು ಮತ್ತು ಅಳಿಯನ ಜೊತೆ ಸೇರಿಕೊಂಡು ನಗರದ ಕೆಲವೊಂದು ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಅವಳ ಬಳಿ ಮೊಬೈಲ್ ಪೋನ್ ಕೂಡಾ ಇಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಸುಮಾರು 6 ಬಾರಿ ಮನೆಯಲ್ಲಿ ಯಾರಿಗೂ ಹೇಳದೆ ಹೋಗಿದ್ದು, ಬಳಿಕ ತಾನಾಗಿಯೇ ಮರಳಿ ಮನೆಗೆ ಬಂದಿರುತ್ತಾಳೆ. ಹೊರಗೆ ಹೋದಾಗ ಕಪ್ಪುಬಣ್ಣದ ಫ್ಯಾಂಟ್ ಮತ್ತು ಕಪ್ಪುಬಣ್ಣದ ಕುರ್ತಾ ಧರಿಸಿದ್ದು, ಈಕೆಯನ್ನು ಪತ್ತೆ ಹಚ್ಚಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
Next Story