ನೀಲಾವರ ಕಿಂಡಿ ಅಣೆಕಟ್ಟಲ್ಲಿ ಉಪ್ಪು ನೀರು ಸೋರಿಕೆಗೆ ತಡೆ

ಉಡುಪಿ, ಡಿ.14: ಸೀತಾನದಿಗೆ ಬ್ರಹ್ಮಾವರ ಸಮೀಪದ ನೀಲಾವರ ಗ್ರಾಮದ ನೀಲಾವರ- ಬಂಡಿಮಠ ಎಂಬಲ್ಲಿ ನಿರ್ಮಿಸಲಾದ ಉಪ್ಪು ನೀರು ತಡೆ ಅಣೆಕಟ್ಟಿನ ತಡೆಗೋಡೆಯ ಹಲಗೆಯಲ್ಲಿ ನೀರು ಸೋರಿಕೆಯಾಗಿ ಉಪ್ಪು ನೀರು ಹರಿದು ಕೃಷಿಗೆ ಹಾಗೂ ಕುಡಿಯುವ ನೀರಿಗೆ ತೊಂದರೆಯಾಗು ತ್ತಿರುವ ದೂರು ಸ್ಥಳೀಯರಿಂದ ಕೇಳಿಬಂದಿದೆ.
ಈ ಕುರಿತು ಸ್ಥಳೀಯರ ಮನವಿಯಂತೆ ದೂರಿಗೆ ಸ್ಪಂದಿಸಿದ ಶಾಸಕ ಕೆ ರಘುಪತಿ ಭಟ್ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಹಾಗೂ ಗುತ್ತಿಗೆದಾರ ರಿಗೆ ತಕ್ಷಣವೇ ಸೂಕ್ತ ಕ್ರಮಕೈಗೊಂಡು ಉಪ್ಪು ನೀರು ಸೋರಿಕೆ ಯಾಗುವುದನ್ನು ತಡೆಗಟ್ಟುವಂತೆ ಸೂಚಿಸಿದ್ದರು.
ಅದರಂತೆ ಇಂದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಉಪ್ಪು ನೀರಿನ ತಡೆಗೋಡೆಯಲ್ಲಿನ ಹಲಗೆ ಸರಿಪಡಿಸಿ ಅಳವಡಿಸುವಕಾಮಗಾರಿ ನಡೆಸಿ ಉಪ್ಪುನೀರು ಸೋರಿಕೆಯಾಗುವುದನ್ನು ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
Next Story





