ಲೇಡಿಗೋಶನ್ ಆಸ್ಪತ್ರೆಯ ಹೈರಿಸ್ಕ್ ವಾರ್ಡ್‌ಗೆ ಐಸಿಯು ಘಟಕ ಹಸ್ತಾಂತರ

ಮಂಗಳೂರು, ಡಿ.14: ಸಮುದಾಯ ಅಭಿವೃದ್ಧಿ ಆಧಾರಿತ ಯೋಜನೆಯ ಅಂಗವಾಗಿ ರೋಟರಿ ಕ್ಲಬ್ ಆಫ್ ಮಂಗಳೂರು ಸಿಟಿ ವತಿಯಿಂದ ನಗರದ ಲೇಡಿಗೋಶನ್ ಆಸ್ಪತ್ರೆಯ ಹೈರಿಸ್ಕ್ ವಾರ್ಡ್‌ನಲ್ಲಿ ೩೪ ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾದ ತೀವ್ರ ನಿಗಾ ಘಟಕ (ಐಸಿಯು)ದ ಹಸ್ತಾಂತರ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಶ್ವ ರೋಟರ್ಯಾಕ್ಟ್ ಸಹ ಅಧ್ಯಕ್ಷ ರವಿ ವದ್ಲಮನಿ ಫೌಂಡೇಶನ್‌ನ ಜಾಗತಿಕ ಅನುದಾನದಡಿ ಅಮೆರಿಕದ ಇಂಡಿಯಾನಾದಲ್ಲಿರುವ ರೋಟರಿ ಕ್ಲಬ್ ಆಫ್ ಸ್ಕೆರೆವಿಲ್ಲೆ ಸಹಯೋಗದಲ್ಲಿ ಈ ಘಟಕ ನಿರ್ಮಿಸಲಾಗಿದೆ. ಲೇಡಿಗೋಶನ್ ಅತ್ಯಂತ ಶುಚಿತ್ವದ ಮತ್ತು ಮಾದರಿ ಆಸ್ಪತ್ರೆಯಾಗಿದೆ. ಮಾಜಿ ಜಿಲ್ಲಾ ಗವರ್ನರ್ ರೊ.ದಿ. ಸೂರ್ಯಪ್ರಕಾಶ್ ಭಟ್ ಸ್ಮರಣಾರ್ಥ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ಉಪ ಮೇಯರ್ ಪೂರ್ಣಿಮಾ, ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ನಿಕಟಪೂರ್ವ ಗವರ್ನರ್ ರವೀಂದ್ರ ಭಟ್, ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾ ಪ್ರಸಾದ್ ಎಂ.ಆರ್., ಜಾಗತಿಕ ಅನುದಾನ ಯೋಜನೆ ಅಧ್ಯಕ್ಷ ಡಾ. ರಂಜನ್, ಕ್ಲಬ್ ಕಾರ್ಯದರ್ಶಿ ಪ್ರಶಾಂತ್ ರೈ, ನಿಕಟಪೂರ್ವ ಅಧ್ಯಕ್ಷ ಕ್ಯಾನುಟ್ ಜೆ.ಪಿಂಟೋ, ಪ್ರಮುಖರಾದ ಸೂರ್ಯನಾರಾಯಣ ಕುಕ್ಕಾಡಿ, ಸೂರಜ್ ಹೆಬ್ಬಾರ್, ಕೃಷ್ಣ ಶೆಟ್ಟಿ, ರಾಜೇಂದ್ರ ಕಲ್ಬಾವಿ, ರಂಗನಾಥ ಭಟ್, ಡಾ.ಎಸ್. ಆರ್. ನಾಯಕ್, ಪ್ರಕಾಶ್ ಕಾರಂತ್ ಮತ್ತಿತರರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಆಫ್ ಮಂಗಳೂರು ಸಿಟಿ ಅಧ್ಯಕ್ಷ ಬಸವ ಕುಮಾರ್ ಟಿ.ಎನ್. ಸ್ವಾಗತಿಸಿದರು. ಕ್ಲಬ್‌ನ ಕಾರ್ಯದರ್ಶಿ ಪ್ರಶಾಂತ್ ರೈ ವಂದಿಸಿದರು. ಸುಮಿತ್ ಎಸ್. ರಾವ್ ಕಾರ್ಯಕ್ರಮ ನಿರೂಪಿಸಿದರು.