ದುಬೈ, ಕುವೈತ್‌ನಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ

ಮಂಗಳೂರು, ಡಿ.14: ದುಬೈ ಮತ್ತು ಕುವೈತ್ ದೇಶಗಳಲ್ಲಿ ಮನೆ ಕೆಲಸ ನಿರ್ವಹಿಸಲು 800 ಮಂದಿ ಮಹಿಳಾ ಕೆಲಸಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು 30-45ರ ವಯೋಮಿತಿಯಲ್ಲಿರಬೇಕು. ಪಾಸ್‌ಪೋರ್ಟ್ ಹೊಂದಿರಬೇಕು. ಟಿಕೆಟ್ ಮತ್ತು ವೀಸಾ ವೆಚ್ಚವನ್ನು ವಿದೇಶಿ ನಿಯೋಜಕರು ಭರಿಸಲಿದ್ದಾರೆ.
ಎರಡು ವರ್ಷಗಳ ಸೇವಾವಧಿ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ಉರ್ವ ಮಾರುಕಟ್ಟೆ ಕಟ್ಟಡದ ಎರಡನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಗೆ ಭೇಟಿ ನೀಡಬಹುದು.
ಹೆಚ್ಚಿನ ಮಾಹಿತಿಗೆ ಸಂಯೋಜಕರ ಮೊ.ಸಂ: 9110248485ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





