ರಾಜ್ಯ ಐಎಂಎ ಕುಟುಂಬ ವೈದ್ಯರ ಅಧ್ಯಕ್ಷರಾಗಿ ಡಾ. ಅಣ್ಣಯ್ಯ ಕುಲಾಲ್ ಆಯ್ಕೆ

ಮಂಗಳೂರು, ಡಿ.14: ಭಾರತೀಯ ವೈದ್ಯಕೀಯ ಸಂಘದ ಪ್ರತಿಷ್ಠಿತ ಅಂಗ ಸಂಸ್ಥೆಗಳಲ್ಲಿ ಒಂದಾಗಿರುವ ಕರ್ನಾಟಕ ರಾಜ್ಯ ಕುಟುಂಬ ವೈದ್ಯರ ನಿರ್ದೇಶಕ/ಅಧ್ಯಕ್ಷರಾಗಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ೨೦೨೨-೨೪ರ ಸಾಲಿಗೆ ಅವಿರೋದವಾಗಿ ಆಯ್ಕೆಯಾಗಿದ್ದಾರೆ.
ಸಾಹಿತಿ, ಸಂಘಟಕರೂ ಆಗಿರುವ ಡಾ.ಕುಲಾಲ್ ಮಂಗಳೂರು ಕುಟುಂಬ ವೈದ್ಯರ ಸಂಘದ ಸ್ಥಾಪಕ ಕಾರ್ಯ ದರ್ಶಿಯಾಗಿದ್ದರು. ಪ್ರಸ್ತುತ ಅಧ್ಯಕ್ಷರಾಗಿರುವ ಡಾ. ಕುಲಾಲ್ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರಾಗಿ ಸಾಕಷ್ಟು ಜವಾಬ್ದಾರಿ ನಿರ್ವಹಿಸಿ ರಾಜ್ಯ ಐಎಂಎ ಕೊಡ ಮಾಡುವ ಡಾ.ಬಿ.ಸಿ. ರಾಯ್ ಪ್ರಶಸ್ತಿ, ವೈದ್ಯ ಬ್ರಹ್ಮ ಪ್ರಶಸ್ತಿ, ಕರ್ನಾಟಕ ಸರಕಾರ ಕೊಡಮಾಡುವ ಪ್ರತಿಷ್ಠಿತ ಡಿ. ದೇವರಾಜ ಅರಸು ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯ ಪ್ರಕಟನೆ ತಿಳಿಸಿದೆ.
Next Story