ಉಳ್ಳಾಲ ಮೇಲಂಗಡಿ: ‘ಆತ್ಮೀಯ ಸಮಾಗಮ’ ಸಮಾರೋಪ

ಮಂಗಳೂರು, ಡಿ.14: ಉಳ್ಳಾಲದ ಮೇಲಂಗಡಿಯ ಎಸ್‌ವೈಎಸ್-ಎಸೆಸ್ಸೆಫ್ ವತಿಯಿಂದ ಉಳ್ಳಾಲ ದಗಾ ಮುಖ್ಯ ರಸ್ತೆಯ ಬಿಸ್ಮಿಲ್ಲಾ ಕಾಂಪೌಂಡ್‌ನ ಅಹ್ಮದ್ ಬಾವಾ ಉಸ್ತಾದ್ ನಗರದ, ತಾಯಕ್ಕೋಡ್ ಉಸ್ತಾದ್ ಸಭಾಂಗಣದ, ತಾಜುಲ್ ಉಲಮಾ ವೇದಿಕೆಯಲ್ಲಿ ಇತ್ತೀಚೆಗೆ ಆರಂಭಗೊಂಡಿದ್ದ ‘ಆತ್ಮೀಯ ಸಮಾಗಮ’ ಮಂಗಳವಾರ ಸಮಾರೋಪಗೊಂಡಿತು.
ಬುರ್ದಾ ಮಜ್ಲಿಸ್, ಮದನಿ ಮೌಲಿದ್, ತಾಜುಲ್ ಉಲಮಾ ಮೌಲಿದ್, ಮುಹಿಯ್ಯುದ್ದೀನ್ ಮಾಲೆ, ನಾರಿಯತುಸ್ಸಲಾತ್ ಮಜ್ಲಿಸ್, ಅನುಸ್ಮರಣಾ ಸಂಗಮ, ಜಲಾಲಿಯ್ಯಾ ರಾತೀಬ್, ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ನೇತೃತ್ವದಲ್ಲಿ ಮದನಿಯಮ್ ಮಜಲಿಸ್ ಇತ್ಯಾದಿ ಕಾರ್ಯಕ್ರಮದಲ್ಲಿ ನಡೆಯಿತು.
ಮದನೀಯಂ ಮಜ್ಲಿಸ್‌ನಲ್ಲಿ ಎಸ್‌ವೈಎಸ್ ಮೇಲಂಗಡಿ ಅಧ್ಯಕ್ಷ ಹನೀಫ್ ಮದನಿ, ಕಾರ್ಯದರ್ಶಿ ಖಲೀಲ್, ಸಯ್ಯಿದ್ ಜಲಾಲ್ ತಂಙಳ್ ಅಳೇಕಲ, ಉಳ್ಳಾಲ ದರ್ಗಾ ಮಾಜಿ ಆಧ್ಯಕ್ಷ ಯು.ಎಸ್. ಹಂಝ ಹಾಜಿ, ಎಸ್‌ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಶಿಯಾಬುದ್ದೀನ್ ಸಖಾಫಿ, ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಹನೀಫ್ ಹಾಜಿ, ಮುಈನುದ್ದೀನ್ ಅಮ್ಜದಿ, ವಳವೂರು ಸಖಾಫಿ, ಉವೈಸಿ ಇಶಾಮಿ, ಅಬ್ಬಾಸ್ ಮದನಿ, ಮುಸ್ತಫ ಮದನಿ, ಎಸ್‌ವೈಎಸ್ ಉಳ್ಳಾಲ ಸೆಂಟರ್ ಪ್ರದಾನ ಕಾರ್ಯದರ್ಶಿ ಇಸ್ಹಾಕ್ ಪೇಟೆ, ಯು.ಎಚ್ ಇಸ್ಮಾಯಿಲ್, ಕೌನ್ಸಿಲರ್ ಜಬ್ಬಾರ್ ಮೇಲಂಗಡಿ, ಕರೀಮ್ ಹಾಜಿ, ಝೈನುದ್ದೀನ್ ಮೇಲಂಗಡಿ, ಸಾಮಾಜಿಕ ಕಾರ್ಯಕತರ್ ಸಾಜಿದ್ ಉಳ್ಳಾಲ್, ಮಾಸ್ತಿಕಟ್ಟೆ ಮಸೀದಿಯ ಖತೀಬ್ ಸಮದ್ ಅಹ್ಸನಿ, ಎಸ್‌ವೈಎಸ್ ಉಪಾಧ್ಯಕ್ಷ ಯುಸುಫ್ ಹಾಜಿ, ಸತ್ತಾರ್ ಮೇಲಂಗಡಿ, ಅಶ್ರಫ್ ಗುಡ್ಡಿಹಿತ್ಲು, ಸಮದ್ ಮೇಲಂಗಡಿ, ನವಾಝ್, ಅಕ್ಬರ್, ಹಮೀದ್, ಝಿಯಾದ್, ಹನೀಫ್ ಬೊಟ್ಟು, ಶಫೀಕ್, ರಮೀಝ್, ಮುಆಝ್, ಬಾತಿಶ್ ಉಪಸ್ಥಿತರಿದ್ದರು.
ರಾಜ್ಯ ಹೈಕೋರ್ಟ್ ನ್ಯಾಯವಾದಿಯಾಗಿರುವ ಹಸೈನಾರ್ ಹಿಮಮಿ ಅವರನ್ನು ಸನ್ಮಾನಿಸಲಾಯಿತು. ಸೆಂಟರ್ ಕೊಶಾಧಿಕಾರಿ ಬಶೀರ್ ಸಖಾಫಿ ಸ್ವಾಗತಿಸಿದರು. ಅಬ್ದುಲ್ ಖಾದರ್ ಜಿಲಾನಿ ಕಾರ್ಯಕ್ರಮ ನಿರೂಪಿಸಿದರು.