ಖತರ್ ವಿಶ್ವಕಪ್: ಕ್ರೀಡಾಂಗಣದ 8ನೇ ಮಹಡಿಯಿಂದ ಬಿದ್ದು ವಲಸೆ ಕಾರ್ಮಿಕ ಮೃತ್ಯು

ದೋಹಾ: ವಿಶ್ವಕಪ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರೊಬ್ಬರು ಖತರ್‌ನ ಕ್ರೀಡಾಂಗಣವೊಂದರ ಎಂಟನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮತ್ತು ವ್ಯಕ್ತಿಯ ಕುಟುಂಬವು ತಿಳಿಸಿರುವುದಾಗಿ CNN ವರದಿ ಮಾಡಿದೆ.
24 ವರ್ಷದ ಕೀನ್ಯಾದ ಜಾನ್ ನ್ಜು ಕಿಬು, ಖತರ್‌ನ ಲುಸೈಲ್ ಸ್ಟೇಡಿಯಂನಲ್ಲಿ ಕರ್ತವ್ಯದಲ್ಲಿದ್ದರು.
"ಮೂರು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿದ್ದ ಅವರು ವೈದ್ಯಕೀಯ ತಂಡದ ಪ್ರಯತ್ನಗಳ ಹೊರತಾಗಿಯೂ ಡಿಸೆಂಬರ್ 13 ರಂದು ಆಸ್ಪತ್ರೆಯಲ್ಲಿ ನಿಧನರಾದರು ಎಂದು ಘೋಷಿಸಲು ನಾವು ವಿಷಾದಿಸುತ್ತೇವೆ" ಎಂದು ಖತರ್ ಸರ್ಕಾರದ ಮೂಲಗಳು ಹೇಳಿದೆ.
ತಲೆಗೆ ತೀವ್ರವಾದ ಗಾಯಗಳಾದ, ದೇಹದ ಹಲವು ಭಾಗಗಳು ಮುರಿತಕ್ಕೊಳಗಾಗಿದ್ದ ಕಿಬು ಅವರನ್ನು ದೋಹಾದ ಹಮಾದ್ ಜನರಲ್ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: ಚಲಿಸುತ್ತಿರುವ ರೈಲಿನ ಫುಟ್‌ಬೋರ್ಡ್‌ನಲ್ಲಿ ಸೋನು ಸೂದ್ ಪ್ರಯಾಣ: ಮುಂಬೈ ರೈಲ್ವೇ ಪೊಲೀಸ್ ಪ್ರತಿಕ್ರಿಯೆ
Next Story