5, 8ನೇ ತರಗತಿಗೆ ಪೂರಕ ಪರೀಕ್ಷೆ; ಆದೇಶ ಹಿಂಪಡೆದ ಶಿಕ್ಷಣ ಇಲಾಖೆ
![5, 8ನೇ ತರಗತಿಗೆ ಪೂರಕ ಪರೀಕ್ಷೆ; ಆದೇಶ ಹಿಂಪಡೆದ ಶಿಕ್ಷಣ ಇಲಾಖೆ 5, 8ನೇ ತರಗತಿಗೆ ಪೂರಕ ಪರೀಕ್ಷೆ; ಆದೇಶ ಹಿಂಪಡೆದ ಶಿಕ್ಷಣ ಇಲಾಖೆ](https://www.varthabharati.in/sites/default/files/images/articles/2022/12/15/360195-1671078311.jpg)
ಬೆಂಗಳೂರು,ಡಿ.15: ಮೌಲ್ಯಾಂಕನ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ಹಿಂಪಡೆದುಕೊಂಡಿದೆ.
ಈ ಹಿಂದೆ ಮಾಡಿರುವ ಆದೇಶದ ಪ್ರಕಾರ ಮೌಲ್ಯಾಂಕನ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಜೂನ್ ಹಾಗೂ ಜುಲೈ ತಿಂಗಳ ಅಂತ್ಯದಲ್ಲಿ ಪರಿಹಾರ ಬೋಧನೆ ಮಾಡಿ ಎರಡು ಪೂರಕ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿಯೇ ನಡೆಸಲಾಗುವುದು. ಜತೆಗೆ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆಗೊಳಿಸಬೇಕು ಎಂದು ಸೂಚಿಸಲಾಗಿತ್ತು.
ಆದರೆ, ಸದ್ಯ ಪರೀಕ್ಷೆ ಬದಲಾಗಿ ಶಾಲಾ ಹಂತದಲ್ಲೇ ಅದೇ ಅವಧಿಯಲ್ಲಿ ಪರಿಹಾರ ಬೋಧನೆ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
Next Story