ಬಾಂಗ್ಲಾದೇಶದ ವಿರುದ್ದ ಮೊದಲ ಟೆಸ್ಟ್; ಭಾರತ 404 ರನ್ ಗೆ ಆಲೌಟ್

ಢಾಕಾ, ಡಿ.15: ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ 404 ರನ್ ಗೆ ಆಲೌಟಾಗಿದೆ.
2ನೇ ದಿನದಾಟವಾದ ಗುರುವಾರ 6 ವಿಕೆಟ್ ನಷ್ಟಕ್ಕೆ 278 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ 133.5 ಓವರ್ ಗಳಲ್ಲಿ 404 ರನ್ ಗಳಿಸಿ ಸರ್ವಪತನವಾಯಿತು. ಕೆಳ ಕ್ರಮಾಂಕದಲ್ಲಿ ಆರ್. ಅಶ್ವಿನ್ 58 ರನ್(113 ಎಸೆತ), ಕುಲದೀಪ್ ಯಾದವ್(40 ರನ್)ಒಂದಷ್ಟು ಹೋರಾಟ ನೀಡಿ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು.
ಬಾಂಗ್ಲಾದೇಶದ ಪರ ತೈಜುಲ್ ಇಸ್ಲಾಂ(4-133) ಹಾಗೂ ಮಹಿದಿ ಹಸನ್ (4-112) ತಲಾ 4 ವಿಕೆಟ್ ಪಡೆದರು.
Next Story





