Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ಸಂಸದ...

ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ಸಂಸದ ವಿ.ಶ್ರಿನಿವಾಸ ಪ್ರಸಾದ್ ಅಲೆಮಾರಿಗಳ ರಾಜ: ಎಚ್.ವಿಶ್ವನಾಥ್ ವಾಗ್ದಾಳಿ

''ನನ್ನ ಅಜೆಂಡಾ ಬದಲಾಗಲ್ಲ...''

15 Dec 2022 4:09 PM IST
share
ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ಸಂಸದ ವಿ.ಶ್ರಿನಿವಾಸ ಪ್ರಸಾದ್ ಅಲೆಮಾರಿಗಳ ರಾಜ: ಎಚ್.ವಿಶ್ವನಾಥ್ ವಾಗ್ದಾಳಿ
''ನನ್ನ ಅಜೆಂಡಾ ಬದಲಾಗಲ್ಲ...''

ಮೈಸೂರು, ಡಿ.15: 'ಸಂಸದ ವಿ.ಶ್ರೀನಿವಾಸ ಪ್ರಸಾದ್ ನನನ್ನು ಅಲೆಮಾರಿ ಎಂದಿದ್ದಾರೆ. ನಾನು ಅಲೆಮಾರಿಯಾದರೆ ಸಂಸದ ಶ್ರೀನಿವಾಸ ಪ್ರಸಾದ್ ಅಲೆಮಾರಿಗಳ ರಾಜ' ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು 40 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದೆ, ನಂತರ ಜೆಡಿಎಸ್ ಗೆ ಹೋದೆ ಈಗ ಬಿಜೆಪಿಯಲ್ಲಿದ್ದೇನೆ. ಆದರೆ ನೀವು ಮೊದಲು ಆರೆಸ್ಸೆಸ್ ಕಾರ್ಯಕರ್ತನಾಗಿ, ನಂತರ ನಿಜಲಿಂಗಪ್ಪ ಅವರ ಸಂಸ್ಥಾ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶ ಮಾಡಿ ತಿ.ನರಸೀಪುರದಲ್ಲಿ ಚುನಾವಣೆಗೆ ನಿಂತು ಸೋತಿರಿ. ನಂತರ ಕಾಂಗ್ರೆಸ್ ಪಕ್ಷಕ್ಕೆ ಬಂದು ಬಳಿಕ ಸಂಯುಕ್ತ ಜನತಾ ದಳ ಸೇರಿದಿರಿ, ನಂತರ ಜಾಜ್೯ ಫರ್ನಾಂಡೀಸ್ ಅವರ ಸಮತಾ ಪಕ್ಷಕ್ಕೆ ಹೋಗಿ ಕೇಂದ್ರದಲ್ಲಿ ಮಂತ್ರಿಯೂ ಆದಿರಿ. ಇದಾದನಂತರ ಜಾತ್ಯಾತೀತ ಜನತಾದಳಕ್ಕೆ ಬಂದಿರಿ. ನಂತರ ಕಾಂಗ್ರೆಸ್ ಪಕ್ಷಕ್ಕೆ ಬಂದು ಮಂತ್ರಿಯೂ ಆದಿರಿ. ಈಗ ಬಿಜೆಪಿ ಸೇರಿ ಸಂಸದರಾಗಿದ್ದೀರಿ. ಒಂದೊಂದು ಪಕ್ಷದಲ್ಲಿ ಎರಡೆರಡು ಬಾರಿ ಬಂದು ಹೋಗಿದ್ದೀರಿ. ಹಾಗಿದ್ದ ಮೇಲೆ ನಾವು ಅಲೆಮಾರಿಗಳಾದರೆ ನೀವು ಅಲೆಮಾರಿಗಳ ರಾಜ ಅಲ್ಲವೇ?' ಎಂದು ತಿರುಗೇಟು ನೀಡಿದರು.

''ದಲಿತ ಶೋಷಿತ ವರ್ಗಗಳ ನಾಯಕ ಎಂದು ನಿಮ್ಮನ್ನು ಜನ ನೋಡುತ್ತಿದ್ದರು. ಆದರೆ ಈಗ ನೀವು ಏನು ಮಾಡುತ್ತಿದ್ದೀರಿ? ಸಂಸದರಾದ ಬಳಿಕ ದಲಿತ ಶೋಷಿತ ಸಮುದಾಯದ ಪರ ಒಂದೇ ಒಂದು ಧ್ವನಿ ಎತ್ತಿದ್ದೀರ? ತಮ್ಮ ಸ್ವಾರ್ಥಕ್ಕಾಗಿ ಶೋಷಿತ, ದಲಿತ ಸಮುದಾಯವನ್ನೇ ಬಲಿ ಕೊಟ್ಟಿರಿ'' ಎಂದು ಕಿಡಿಕಾರಿದರು.

ಬಿಜೆಪಿ ಹೈಕಮಾಂಡ್ ಮತ್ತು ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರುಗಳನ್ನು ಓಲೈಸಿಕೊಳ್ಳಲು ನನ್ನ, ಸಿದ್ಧರಾಮಯ್ಯ ಮತ್ತು ಎಐಸಿಸಿ ಅಧದಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು  ಬೈಯ್ಯುತ್ತಿದ್ದೀರಿ. ನಮ್ಮಗಳ ಟೀಕೆ ಹಿಂದೆ ನಿಮ್ಮ ಸ್ವಾರ್ಥ ಅಡಗಿದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುತ್ತಿರುವುದನ್ನು ಮನಗಂಡು ನಮ್ಮಗಳ ವಿರುದ್ಧ ಟೀಕೆ ಮಾಡುತ್ತಿದ್ದೀರಿ. ಕಾರಣ ನಂಜನಗೂಡಿನಿಂದ ಶಾಸಕರಾಗಿರುವ ನಿಮ್ಮ ಅಳಿಯನನ್ನು ಮಂತ್ರಿ ಮಾಡಬೇಕು ಎಂದು. ಮತ್ತೆ ಮುಂದಿನ ಲೋಕಸಭೆಗೆ ನಿಮ್ಮ ಇನ್ನೊಬ್ಬ ಅಳಿಯನಿಗೆ ಬಿಜೆಪಿ ಟಿಕೆಟ್ ಸಿಗಬೇಕು, ಟಿ.ನರಸೀಪುರದಲ್ಲಿ ನಿಮ್ಮ ಮಗಳಿಗೆ ಬಿಜೆಪಿ ಟಿಕೆಟ್ ಕೊಡಿಸಬೇಕು.‌ಇದು ನಿಮ್ಮ ಸ್ವಾರ್ಥ ಅಲ್ಲವೆ? ಎಂದು ಪ್ರಶ್ನಿಸಿದರು.

ನನ್ನ ಮತ್ತು ನಿಮ್ಮ ಸ್ನೇಹ ಅರ್ಧ ಶತಮಾನದ್ದು, ನಾನು ನೀವು ರಾಜಕೀಯವಾಗಿ ಅಲ್ಲದೆ ಸ್ನೇಹಿತರಾಗಿ ಸೌಹಾರ್ಧಯುತವಾಗಿ ಇದ್ದವರು. ಆದರೆ ನೀವು ನನ್ನ ಕುರಿತು ಅಲೆಮಾರಿ ಎನ್ನಬಹುದೆ? ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಬನ್ನಿ ಎಂದು ವಿಜಯೇಂದ್ತ ಅವರ ಮನೆಗೆ ನನ್ನನ್ನು ಕೈಹಿಡಿದು ಕರೆದುಕೊಂಡು ಹೋಗಲಿಲ್ಲವೇ? ಜೆಡಿಎಸ್ ಬಿಟ್ಟು ಬಿಜೆಪಿಗೆ ಬನ್ನಿ ಎಂದು ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಮತ್ತು ನೀವು  ನನಗೆ ದುಡ್ಡು ಕೊಡಲು ಬರಲಿಲ್ಲವೇ ಎಂದು ಪ್ರಶ್ನೆಗಳ ಸುರಿಮಳೆಗೈದರು.

ನನ್ನ ಬಾಂಬೆ ಡೇಸ್ ಪುಸ್ತಕದಲ್ಲಿ ಈ ಎಲ್ಲಾ ವಿಚಾರಗಳನ್ನು ದಾಖಲೆ ಮಾಡಿದ್ದೇನೆ. ಶೀಘ್ರದಲ್ಲೇ ಈ ಪುಸ್ತಕ ಹೊರಬರಲಿದೆ ಎಂದು ಹೇಳಿದರು.

ನಾನು ಸಿದ್ಧರಾಮಯ್ಯ ಅವರ ವಿರುದ್ಧ ರಾಜಕೀಯವಾಗಿ ಹೋರಾಟ ಮಾಡಿರಬಹುದು. ಆದರೆ ನಾನು ಸಿದ್ಧರಾಮಯ್ಯ ವೈಯಕ್ತಿಕವಾಗಿ ಸ್ನೇಹಿರಾಗೆ ಇದ್ದೇವೆ. ಅವರ ಆರೋಗ್ಯ ಸರಿ ಇಲ್ಲದಾಗ ಅವರನ್ನು ಧರ್ಮಸಹಿಷ್ಣುತೆಗಾಗಿ ಭೇಟಿ ಮಾಡಿದ್ದು ತಪ್ಪಾಯಿತೆ? ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನನಗೆ ನಲವತ್ತು ವರ್ಷದ ಸ್ನೇಹಿತರು. ಅವರು ಬೆಂಗಳೂರಿನ ಹೋಟೆಲ್ ನಲ್ಲಿ ಇದ್ದರು ಎಂಬ ಮಾಹಿತಿ ತಿಳಿದು ಅವರ ಅಪಾಯಿಂಟ್ ಮೆಂಟ್ ತೆಗೆದು ಕೊಂಡು ಹೋಗಿ ಅವರಿಗೆ ಸ್ವಾಗತ ಮಾಡಿದೆ ಅದು ತಪ್ಪೇ? ಡಿ.ಕೆ.ಶಿವಕುಮಾರ್ ನಾನು ಸ್ನೇಹಿತರು ರಾಜಕೀಯ ಬಿಟ್ಟು ಅವರನ್ನು ಭೇಟಿ ಮಾಡಿದ್ದು ತಪ್ಪೇ?  ಎಂದ ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್, ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಆರೋಗ್ಯ ಮತ್ತು ವಯಸ್ಸಿನಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ ಎನಿಸುತ್ತದೆ ಎಂದು ಲೇವಡಿ ಮಾಡಿದರು.

ನನ್ನ ಜಂಡಾ ಬದಲಾಗಿದ್ದರು ಅಜೆಂಡಾ ಬದಲಾಗಲ್ಲ: ನಾನು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷನಾಗಿ ಜಂಡಾ ಬದಲಾಯಿಸಿದ್ದರು ನನ್ನ ಅಜೆಂಡಾ ಮಾತ್ರ ಬದಲಾಗಿಲ್ಲ, ನಾನು ಎಲ್ಲೇ ಇದ್ದರು ನನ್ನ ನಿಲುವುಗಳನ್ನು ಬದಲಾಯಿಸುವುದಿಲ್ಲ. ನೊಂದವರ, ಕಷ್ಟದಲ್ಲಿರುವವರ ಪರ ನನ್ನ ಅಜೆಂಡಾ ಇರುತ್ತದೆ ಎಂದು ಹೇಳಿದರು.

ನಾನು ಬಿಜೆಪಿ ಸೇರಿದ ನಂತರ ನನಗೆ ಯಡಿಯೂರಪ್ಪ, ಸಂಸದ ವಿ.ಶ್ರೀನಿವಾಸ ಪ್ರಸಾದ್ ಸೇರಿದಂತೆ ಎಲ್ಲರೂ ಮೋಸ ಮಾಡಿದರು. ಆದರೆ ನನಗೆ ವಿಧಾನಪರಿಷತ್ ಸದಸ್ಯ ಸ್ಥಾನ ಸಿಗಲು ಆರ್.ಎಸ್.ಎಸ್.ರಾಜ್ಯ ಪ್ರಮುಖ ಮುಕುಂದ್ ಅವರು ಕಾರಣ ಅವರು ಇಲ್ಲ ಎಂದಿದ್ದರೆ ನನಗೆ ಮೋಸವಾಗುತ್ತಿತ್ತು ಎಂದು ವಿಶ್ವನಾಥ್ ಹೇಳಿದರು.

ಅಶೋಕಪುರಂ ಗೆ ನಿಮ್ಮ ಕೊಡುಗೆ ಏನು: ಸಂಸದರಾಗಿ, ಶಾಸಕರಾಗಿ ಸಚಿವರಾಗಿ ನೀವು ಹುಟ್ಟಿ ಬೆಳೆದ ಮೈಸೂರಿನ ಅಶೋಕಪುರಂ ಗೆ ನಿಮ್ಮ ಕೊಡುಗೆ ಏನು ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಗೆ ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಪ್ರಶ್ನಿಸಿದರು.

ಅಶೋಕಪುರಂ‌ನಲ್ಲಿ ಅಂಬೇಡ್ಕರ್ ಸಾಂಸ್ಕೃತಿಕ ಕೇಂದ್ರ ಕಟ್ಟಡ  ಸ್ಥಾಪಿಸುವುದಾಗಿ ಹೇಳಿ ಅದನ್ನು ಅರ್ಧಕ್ಕೆ ಬಿಟ್ಟಿರಿ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಇದಕ್ಕೆ ಅನುದಾನ ನೀಡಿದ್ದರು. ಖ್ಯಾತ ನಟ ಡಾ.ರಾಜ್ ಕುಮಾರ್ ನೈಟ್ಸ್ ಮಾಡಿ ಹಣ ಪಡೆದಿರಿ. ಆದರೆ ಆ ಕೆಲಸವನ್ನು ಪೂರೈಸಲಿಲ್ಲ. 

ನೀವು ಹುಟ್ಟಿ  ಆಟವಾಡಿ ಬೆಳೆದ ಅಶೋಕಪುರಂ ಗೆ ನಿಮ್ಮ ಕೊಡುಗೆ ಶೂನ್ಯ ಇನ್ನು ನೀವು ನನ್ನ ಬಗ್ಗೆ ಮಾತನಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

share
Next Story
X