ಬೆಂಗಳೂರು; ವಸತಿ ಗೃಹದಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ

ಬೆಂಗಳೂರು, ಡಿ. 15: ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ಬನ್ನೇರುಘಟ್ಟದ ಖಾಸಗಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯೊಬ್ಬನ ಮೃತದೇಹವು ವಿದ್ಯಾರ್ಥಿ ವಸತಿ ಗೃಹದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿರುವುದು ವರದಿಯಾಗಿದೆ.
ಕೇರಳ ಮೂಲದ ನಿತಿನ್ (19) ಮೃತ ದುರ್ದೈವಿಯಾಗಿದ್ದಾನೆ. ಡಿ.1ರಂದು ಬನ್ನೇರುಘಟ್ಟ ಸಮೀಪದ ಎಎಂಸಿ ಇಂಜಿನಿಯರಿಂಗ್ ಕಾಲೇಜಿಗೆ ಸಿಇಎಸ್ ಪ್ರಥಮ ವರ್ಷಕ್ಕೆ ನಿತಿನ್ ದಾಖಲಾಗಿದ್ದ. ಕಾಲೇಜಿನ ಕ್ಯಾಂಪಸ್ ಒಳಗಿನ ವಸತಿ ಗೃಹದಲ್ಲಿ ವಾಸವಿದ್ದ. ಆದರೆ, ಗುರುವಾರ ಬೆಳಕಿಗೆ ಶೌಚಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಕತ್ತು ಕೊಯ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಸ್ಥಳಕ್ಕೆ ಬಂದ ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
Next Story





