Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಶ್ರದ್ಧಾ ವಾಲ್ಕರ್ ಹತ್ಯೆ:ಅರಣ್ಯದಲ್ಲಿ...

ಶ್ರದ್ಧಾ ವಾಲ್ಕರ್ ಹತ್ಯೆ:ಅರಣ್ಯದಲ್ಲಿ ಪತ್ತೆಯಾದ ಮೂಳೆಗಳೊಂದಿಗೆ ತಾಳೆಯಾದ ಡಿಎನ್ಎ

15 Dec 2022 7:19 PM IST
share
ಶ್ರದ್ಧಾ ವಾಲ್ಕರ್ ಹತ್ಯೆ:ಅರಣ್ಯದಲ್ಲಿ ಪತ್ತೆಯಾದ ಮೂಳೆಗಳೊಂದಿಗೆ ತಾಳೆಯಾದ ಡಿಎನ್ಎ

ಹೊಸದಿಲ್ಲಿ,ಡಿ.15: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಕೊನೆಗೂ ಮಹತ್ವದ ಸಾಕ್ಷ್ಯಾಧಾರ ಪೊಲೀಸರಿಗೆ ಲಭಿಸಿದೆ. ಆರೋಪಿ ಅಫ್ತಾಬ್ ಪೂನಾವಾಲಾ ನೀಡಿದ್ದ ಮಾಹಿತಿಯ ಮೇರೆಗೆ ದಿಲ್ಲಿಯ ಮೆಹ್ರೌಲಿ ಪ್ರದೇಶದಲ್ಲಿಯ ಅರಣ್ಯದಿಂದ ಮತ್ತು ಗುರುಗ್ರಾಮದಿಂದ ಪೊಲೀಸರು ವಶಪಡಿಸಿಕೊಂಡ ಮೂಳೆಗಳು ಶ್ರದ್ಧಾಳದೇ ಆಗಿವೆ ಎನ್ನುವುದನ್ನು ಡಿಎನ್ಎ ಪರೀಕ್ಷೆಯು ದೃಢಪಡಿಸಿದೆ.

ಪೂನಾವಾಲಾನ ಫ್ಲ್ಯಾಟ್ನಲ್ಲಿ ಪತ್ತೆಯಾಗಿದ್ದ ರಕ್ತದ ಕಲೆಗಳೂ ಶ್ರದ್ಧಾಳದೇ ಆಗಿವೆ ಎನ್ನುವುದನ್ನು ಆಕೆಯ ತಂದೆಯ ರಕ್ತದ ಡಿಎನ್ಎ ಸ್ಯಾಂಪಲ್ಗಳನ್ನು ಬಳಸಿ ನಡೆಸಿದ ಪರೀಕ್ಷಾ ವರದಿಯು ತಿಳಿಸಿದೆ.

ಪೂನಾವಾಲಾನ ಬಂಧನದ ಒಂದು ತಿಂಗಳ ಬಳಿಕ ಪ್ರಮುಖ ಸಾಕ್ಷ್ಯ ಪೊಲೀಸರ ಕೈಸೇರಿದೆ.

ಶ್ರದ್ಧಾಳೊಂದಿಗೆ ಲಿವ್ ಇನ್ ಸಂಬಂಧದಲ್ಲಿ ವಾಸವಿದ್ದ ಪೂನಾವಾಲಾ ಮೇ 18ರಂದು ಆಕೆಯ ಹತ್ಯೆ ಮಾಡಿದ ಬಳಿಕ ಶವವನ್ನು 35 ತುಂಡುಗಳನ್ನಾಗಿಸಿದ್ದ. ಅವುಗಳನ್ನು ಫ್ರಿಡ್ಜ್ನಲ್ಲಿಟ್ಟಿದ್ದ ಆತ ಅವುಗಳನ್ನು ಮುಂದಿನ 18 ದಿನಗಳ ಕಾಲ ತನ್ನ ಬಾಡಿಗೆ ಫ್ಲ್ಯಾಟ್ ಸಮೀಪದ ಮೆಹ್ರೌಲಿ ಅರಣ್ಯದ ವಿವಿಧೆಡೆಗಳಲ್ಲಿ ಎಸೆದಿದ್ದ. ಅಕ್ಟೋಬರ್ನಲ್ಲಿ ಶ್ರದ್ಧಾಳ ತಂದೆ ವಿಕಾಸ ವಾಲ್ಕರ್ ಮಹಾರಾಷ್ಟ್ರದ ತನ್ನೂರಿನ ಪೊಲೀಸರಿಗೆ ದೂರು ಸಲ್ಲಿಸಿದ ಬಳಿಕ ಕ್ರಮೇಣ ಹತ್ಯೆ ವಿಷಯವು ಬೆಳಕಿಗೆ ಬಂದಿತ್ತು.

ಈವರೆಗೆ ಪೊಲೀಸರು ಪೂನಾವಾಲಾ ಬಳಸಿದ್ದ ಕೆಲವು ಚಾಕುಗಳನ್ನು ವಶಪಡಿಸಿಕೊಂಡಿದ್ದರು. ಆತ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿದ್ದಾನಾದರೂ ಅದು ಪ್ರಮುಖ ಸಾಕ್ಷ್ಯವಾಗುವುದಿಲ್ಲ. ಆದಾಗ್ಯೂ ಈ ತಪ್ಪೊಪ್ಪಿಗೆ ಹೇಳಿಕೆಯ ಆಧಾರದಲ್ಲಿ ವಶಪಡಿಸಿಕೊಳ್ಳಲಾಗಿರುವ ವಸ್ತುಗಳನ್ನು ಕೊಲೆಯ ಮುನ್ನ ಮತ್ತು ನಂತರದ ಘಟನಾವಳಿಗಳ ಮರುಸೃಷ್ಟಿಗೆ ಸಾಕ್ಷ್ಯವನ್ನಾಗಿ ಮಂಡಿಸಬಹುದಾಗಿದೆ. ಪೂನಾವಾಲಾನನ್ನು ಪೊಲೀಸರು ಸುಳ್ಳು ಪತ್ತೆ ಪರೀಕ್ಷೆಗೂ ಒಳಪಡಿಸಿದ್ದರು.

ಪೂನಾವಾಲಾ ಜೊತೆಗೆ ಶ್ರದ್ಧಾಳ ಅಂತರಧರ್ಮೀಯ ಸಂಬಂಧದಿಂದಾಗಿ ಅಸಮಾಧಾನಗೊಂಡಿದ್ದ ವಿಕಾಸ ವಾಲ್ಕರ್ ಪುತ್ರಿಯ ಸಂಪರ್ಕದಲ್ಲಿರಲಿಲ್ಲ. ಡೇಟಿಂಗ್ ಆ್ಯಪ್ವೊಂದರಲ್ಲಿ ಭೇಟಿಯಾಗಿದ್ದ ಶ್ರದ್ಧಾ ಮತ್ತು ಪೂನಾವಾಲಾ ಈ ವರ್ಷದ ಮೇ ತಿಂಗಳಿನಲ್ಲಿ ದಿಲ್ಲಿಗೆ ಆಗಮಿಸುವ ಮುನ್ನ ತಮ್ಮ ಹುಟ್ಟೂರು,ಮುಂಬೈ ಸಮೀಪದ ವಾಶಿಯಲ್ಲಿ ಕೆಲಕಾಲ ಒಟ್ಟಿಗೆ ವಾಸವಾಗಿದ್ದರು.

 ಇದನ್ನು ಓದಿ: ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ: ಜೆ.ಪಿ.ನಡ್ಡಾ

share
Next Story
X