ತವಾಂಗ್ ಘರ್ಷಣೆಗಳಿಗೂ ಈಶಾನ್ಯದಲ್ಲಿ ವೈಮಾನಿಕ ತಾಲೀಮುಗಳಿಗೂ ಸಂಬಂಧವಿಲ್ಲ: ವಾಯುಪಡೆ

ಹೊಸದಿಲ್ಲಿ,ಡಿ.15: ಈಸ್ಟರ್ನ್ ಏರ್ ಕಮಾಂಡ್ ತನ್ನ ಸಿಬ್ಬಂದಿಗಳಿಗೆ ತರಬೇತಿ ನೀಡಲು ಈಶಾನ್ಯ ಪ್ರದೇಶದಲ್ಲಿ ವೈಮಾನಿಕ ತಾಲೀಮುಗಳನ್ನು ನಡೆಸುವುದಾಗಿ ತಿಳಿಸಿರುವ ಭಾರತೀಯ ವಾಯುಪಡೆ (ಐಎಎಫ್)ಯು,ತವಾಂಗ್ನಲ್ಲಿಯ ಇತ್ತೀಚಿನ ಬೆಳವಣಿಗೆಗಳಿಗೆ ಮೊದಲೇ ಇವುಗಳನ್ನು ಯೋಜಿಸಲಾಗಿತ್ತು ಮತ್ತು ಈ ಘಟನೆಗಳಿಗೆ ಸಂಬಂಧಿಸಿಲ್ಲ ಎಂದು ತಿಳಿಸಿದೆ.
ಕಳೆದ ಕೆಲವು ವಾರಗಳಲ್ಲಿ ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿ 2-3 ಸಲ ತನ್ನ ಯುದ್ಧವಿಮಾನಗಳನ್ನು ನಿಯೋಜಿಸಿದ್ದ ಸಮಯದಲ್ಲಿಯೇ ಈ ತಾಲೀಮುಗಳು ನಡೆದಿದ್ದರೂ
ಈಶಾನ್ಯ ಪ್ರದೇಶದಲ್ಲಿ ಗುರುವಾರ ಮತ್ತು ಶುಕ್ರವಾರ ನಡೆಸಲಾದ ತರಬೇತಿ ಅಭ್ಯಾಸಗಳು ಚೀನಾದೊಂದಿಗಿನ ಗಡಿ ಘರ್ಷಣೆಗಳಿಗೆ ಸಂಬಂಧಿಸಿಲ್ಲ ಎಂದು ಐಎಎಫ್ ತಿಳಿಸಿದೆ.
ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ)ಯ ಸಮೀಪ ಚೀನಿ ವಿಮಾನಗಳನ್ನು ಪತ್ತೆ ಹಚ್ಚಿದ ಬಳಿಕ ಐಎಎಫ್ ತನ್ನ ಯುದ್ಧವಿಮಾನಗಳನ್ನು ನಿಯೋಜಿಸಿತ್ತು ಎಂದು ಮೂಲಗಳು ತಿಳಿಸಿವೆ.
ಐಎಎಫ್ ಚೀನಿ ವಾಯುಪಡೆಯ ಚಲನವಲನಗಳ ಮೇಲೆ ಕಣ್ಣಿರಿಸಲು ಕಳೆದ ಕೆಲವು ದಿನಗಳಿಂದ ಪ್ರದೇಶದಲ್ಲಿ ವಾಯು ಗಸ್ತನ್ನೂ ನಡೆಸುತ್ತಿದೆ.
ಇದನ್ನು ಓದಿ: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ; ಆರೋಪಿ ಪತ್ತೆಗೆ ಪೊಲೀಸರ ಶೋಧ







