"ನಾನು ಜೀವಂತವಾಗಿದ್ದೇನೆ": ತನ್ನನ್ನು ಪುತ್ರ ಹತ್ಯೆಗೈದಿದ್ದಾನೆಂಬ ವದಂತಿಗೆ ನಟಿ ವೀಣಾ ಕಪೂರ್ ಸ್ಪಷ್ಟನೆ

ಹೊಸದಿಲ್ಲಿ, ಡಿ. 15: ತನ್ನನ್ನು ಪುತ್ರ ಹತ್ಯೆಗೈದಿದ್ದಾನೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಹಿರಿಯ ನಟಿ ವೀಣಾ ಕಪೂರ್ ಅವರು ತನ್ನ ಪುತ್ರನೊಂದಿಗೆ ಆಗಮಿಸಿ ತಪ್ಪು ಮಾಹಿತಿ ಹರಡುವವರ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ.
‘‘ಅದು ಸುಳ್ಳು ಸುದ್ದಿ. ನನ್ನದೇ ಹೆಸರಿನ ಮಹಿಳೆಯೋರ್ವರು ಜುಹುವಿನಲ್ಲಿ ಹತ್ಯೆಯಾಗಿದ್ದಾರೆ. ನಾನು ಗೋರೆಗಾಂವ್ನಲ್ಲಿ ವಾಸಿಸುತ್ತಿದ್ದೇನೆ’’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಅವರ ಪುತ್ರ ಅಭಿಷೇಕ್ ಚಡಾ ಅವರು ಕೂಡ ಈ ವದಂತಿಯನ್ನು ಖಂಡಿಸಿದ್ದಾರೆ. ತಾನು ತಾಯಿಯನ್ನು ಹತ್ಯೆಗೈದಿದ್ದೇನೆ ಎಂದು ಹೇಳುವ ಹಲವು ಕರೆಗಳನ್ನು ಸ್ವೀಕರಿಸಿದ್ದೇನೆ. ಅನಂತರ ವದಂತಿ ಹರಡದಂತೆ ಸಾಮಾಜಿಕ ಮಾಧ್ಯಮದಲ್ಲಿ ವಿನಂತಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
"मैं #वीणा_कपूर हूं और जिंदा हूं!" परेशान महिला ने की लोगों से ये अपील #Veena_Kapoor @MumbaiPolice @CPMumbaiPolice pic.twitter.com/Iwa0u4YMwQ
— Hindusthan Post (@HindusthanPostH) December 15, 2022
Next Story







