ಫೀಫಾ ವಿಶ್ವಕಪ್: ಭಾವುಕರಾದ ಅರ್ಜೆಂಟೀನಾ ವರದಿಗಾರ್ತಿಗೆ ಮೆಸ್ಸಿ ನೀಡಿದ ಉತ್ತರಕ್ಕೆ ವ್ಯಾಪಕ ಮೆಚ್ಚುಗೆ

ಹೊಸದಿಲ್ಲಿ: ಖತರ್‌ನಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕ್ರೊವೇಷಿಯಾ ವಿರುದ್ಧ ಅರ್ಜೆಂಟೀನಾ ತಂಡವು 3-0 ಅಂತರದ ಭರ್ಜರಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕ ಲಿಯೊನೆಲ್ ಮೆಸ್ಸಿ, ತಮ್ಮನ್ನು ಭಾವುಕವಾಗಿ ಪ್ರಶ್ನಿಸಿದ ವರದಿಗಾರ್ತಿಗೆ ಸಮಚಿತ್ತದ ಉತ್ತರ ನೀಡುವ ಮೂಲಕ ವಿಶ್ವಾದ್ಯಂತ ಇರುವ ಫುಟ್‌ಬಾಲ್ ಪ್ರೇಮಿಗಳ ಹೃದಯವನ್ನೂ ಗೆದ್ದಿದ್ದಾರೆ ಎಂದು ndtv.com ವರದಿ ಮಾಡಿದೆ.
ಕ್ರೊವೇಷಿಯಾ ತಂಡದ 3-0 ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟ ನಂತರ ನಡೆದ ಸಂದರ್ಶನದಲ್ಲಿ ಅರ್ಜೆಂಟೀನಾ ತಂಡದ ನಾಯಕ ಹಾಗೂ ಏಳು ಬಾರಿ ಬ್ಯಾಲನ್ ಡಿ'ಓರ್ ಪ್ರಶಸ್ತಿ ವಿಜೇತ ಲಿಯೊನೆಲ್ ಮೆಸ್ಸಿಗೆ ವರದಿಗಾರ್ತಿಗೆ ಭಾವುಕ ಕೃತಜ್ಞತೆ ಅರ್ಪಿಸಿದ್ದಾರೆ. "ಕೊನೆಯದಾಗಿ ಇದು ಪ್ರಶ್ನೆಯಲ್ಲವಾದರೂ ನಾನು ನಿಮಗೆ ಹೇಳಲು ಬಯಸುವುದೇನೆಂದರೆ, ಫೈನಲ್ ಪಂದ್ಯ ಬರುವುದಿದೆ ಮತ್ತು ನಾವೆಲ್ಲ (ಅರ್ಜೆಂಟೀನಾ ಪ್ರಜೆಗಳು) ತಂಡವು ಪ್ರಶಸ್ತಿ ಜಯಿಸಲಿ ಎಂದು ಖಂಡಿತ ಬಯಸುತ್ತೇವೆ" ಎಂದು ಮೆಸ್ಸಿಗೆ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮೆಸ್ಸಿ, "ಫಲಿತಾಂಶ ಏನೇ ಬಂದರೂ ನಮ್ಮಿಂದ ಯಾರೂ ಏನು ಕಸಿದುಕೊಳ್ಳಲು ಸಾಧ್ಯವಿಲ್ಲ. ನೀವು ಅರ್ಜೆಂಟೀನಾ ಪ್ರಜೆಗಳೆಲ್ಲರ ಭಾವನೆಯನ್ನು ಮಾರ್ದನಿಸಿದ್ದೀರಿ. ನಾನು ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇನೆ. ನಿಮ್ಮ ತಂಡದ ದಿರಿಸು ಧರಿಸುವುದು ಕೃತಕವಾಗಿರಲಿ, ನೈಜವಾಗಿರಲಿ ಅಥವಾ ಒಳಸ್ಫೂರ್ತಿಯದ್ದಾಗಿರಲಿ ಅದು ಹಾಸ್ಯದ ಸಂಗತಿಯಲ್ಲ. ನೀವು ಅದರಿಂದ ಪ್ರತಿಯೊಬ್ಬರ ಬದುಕಿನ ಮೇಲೆ ಅಚ್ಚೊತ್ತಿರುತ್ತೀರಿ. ಇದು ನನಗೆ ವಿಶ್ವಕಪ್ ಗೆಲುವಿಗಿಂತ ಹಿರಿದಾಗಿದೆ" ಎಂದು ಹೇಳಿದ್ದಾರೆ.
"ಯಾರೂ ನಿಮ್ಮಿಂದ ಏನೂ ಕಸಿದುಕೊಳ್ಳಲು ಸಾಧ್ಯವಿಲ್ಲ ಮತ್ತು ಲಕ್ಷಾಂತರ ಜನರಿಗೆ ಸಂತಸ ಉಂಟು ಮಾಡಲು ಅವಕಾಶ ದೊರೆತಿದ್ದಕ್ಕೆ ಇದು ನನ್ನ ಕೃತಜ್ಞತೆ" ಎಂದು ಹೇಳುವ ಮೂಲಕ ಫುಟ್‌ಬಾಲ್ ಪ್ರೇಮಿಗಳ ಹೃದಯವನ್ನೂ ಗೆದ್ದಿದ್ದಾರೆ.
ತಮ್ಮ ವೃತ್ತಿಜೀವನದಲ್ಲಿ ಮೆಸ್ಸಿ ಬಹುತೇಕ ಎಲ್ಲ ಪ್ರಶಸ್ತಿಗಳನ್ನು ಗಳಿಸಿದ್ದು, ವಿಶ್ವಕಪ್ ಪ್ರಶಸ್ತಿ ಮಾತ್ರ ಅವರಿಂದ ಇನ್ನೂ ದೂರವೇ ಉಳಿದಿದೆ.
— Emma (@emmaiarussi) December 13, 2022