ಅನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಹಾಕಿ ದ.ಕ. ಜಿಲ್ಲೆಯ ಶಾಂತಿ ಕಾಪಾಡಲು ವೆಲ್ಫೇರ್ ಪಾರ್ಟಿ ಆಗ್ರಹ

ಮಂಗಳೂರು, ಡಿ.15: ಬಿ.ಸಿ.ರೋಡ್ ನಿಂದ ಮೂಡಬಿದ್ರೆ ಹೋಗುತ್ತಿದ್ದ ಕೂಲಿ ಕಾರ್ಮಿಕ ಬಸ್ಸು ಪ್ರಯಾಣಿಕನ ಮೇಲೆ ಕೆಲವು ದುಷ್ಕರ್ಮಿಗಳ ತಂಡದಿಂದ ನಡೆದ ಹಲ್ಲೆ ಘಟನೆಯನ್ನು ಖಂಡಿಸಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ದ.ಕ. ಜಿಲ್ಲಾ ಸಮಿತಿಯು, ಈ ನಿಟ್ಟಿನಲ್ಲಿ ನಮ್ಮ ನಿಷ್ಠಾವಂತ ಪೋಲಿಸ್ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ ಜಿಲ್ಲೆಯ ಶಾಂತಿ ಕಾಪಾಡುವಲ್ಲಿ ಯಾವುದೇ ರಾಜಕೀಯ ಅಥವಾ ರಾಜಕಾರಣಿಗಳ ಪ್ರಭಾವಕ್ಕೆ ಬಲಿಯಾಗದೆ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದೆ.
ಶಾಂತಿ ಸಾಮರಸ್ಯದ ಈ ಸಮಾಜದಲ್ಲಿ ಇಷ್ಟೊಂದು ಕ್ಷುದ್ರ ಶಕ್ತಿಗಳು ಯಾವುದೇ ಕಾರಣಕ್ಕೂ ತಲೆಯೆತ್ತದಂತೆ, ನಮ್ಮ ಜಿಲ್ಲೆಯ ಜನತೆ, ಸದಾ ಎಚ್ಚರಿಕೆಯಿಂದ ಇದ್ದು ಎಲ್ಲಾ ಸಾರ್ವಜನಿಕರು ಐಕ್ಯತೆಯಿಂದ ಇಷ್ಟೊಂದು ಸಮಾಜ ಘಾತುಕ ಶಕ್ತಿಗಳ ಬಗ್ಗೆ ತೀವ್ರ ನಿಗಾವಹಿಸಿಕೊಂಡು ಅವರ ಯಾವುದೇ ವಿಚ್ಚಿದ್ರಕಾರಿ ಯೋಜನೆಯು ಯಶಸ್ವಿಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಅದು ಸಾರ್ವಜನಿಕರಲ್ಲೂ ಮನವಿ ಮಾಡಿಕೊಂಡಿದೆ.
Next Story





