ಅಗ್ನಿ-5 ಕ್ಷಿಪಣಿ ಯಶಸ್ವಿ ಪ್ರಯೋಗ

ಹೊಸದಿಲ್ಲಿ, ಡಿ. 15: 5,400 ಕಿ.ಮೀ. ದೂರದ ಗುರಿಯನ್ನು ಹೊಡೆದುರುಳಿಸಬಲ್ಲ ಅಣ್ವಸ್ತ್ರ ವಾಹಕ ಸಾಮರ್ಥ್ಯದ ಪ್ರಕ್ಷೇಪಕ ಕ್ಷಿಪಣಿ ಅಗ್ನಿ-5ರ ಪರೀಕ್ಷಾರ್ಥ ಪ್ರಯೋಗವನ್ನು ರಾತ್ರಿ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ.
ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಈ ಅಣ್ವಸ್ತ್ರ ವಾಹಕ ಸಾಮರ್ಥ್ಯದ ಕ್ಷಿಪಣಿಯನ್ನು ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು. ಇದು ಅಗ್ನಿ-5ರ 9ನೇ ಆವೃತ್ತಿ. ಮೊದಲ ಆವೃತ್ತಿಯನ್ನು 2012ರಲ್ಲಿ ಪರೀಕ್ಷೆ ನಡೆಸಲಾಗಿತ್ತು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
Next Story





