Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಗಲ್ವಾನ್ ಘರ್ಷಣೆಗಳ ಬಳಿಕ ಚೀನಾದಿಂದ...

ಗಲ್ವಾನ್ ಘರ್ಷಣೆಗಳ ಬಳಿಕ ಚೀನಾದಿಂದ ಭಾರತದ ಆಮದುಗಳಲ್ಲಿ ತೀವ್ರ ಏರಿಕೆ: ವರದಿ

15 Dec 2022 11:59 PM IST
share
ಗಲ್ವಾನ್ ಘರ್ಷಣೆಗಳ ಬಳಿಕ ಚೀನಾದಿಂದ ಭಾರತದ ಆಮದುಗಳಲ್ಲಿ ತೀವ್ರ ಏರಿಕೆ: ವರದಿ

ಹೊಸದಿಲ್ಲಿ: ತವಾಂಗ್ ಘರ್ಷಣೆಗಳ ಹಿನ್ನೆಲೆಯಲ್ಲಿ ಚೀನಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳುವಂತೆ ಮರುಕಳಿಸಿರುವ ಆಗ್ರಹಗಳ ನಡುವೆಯೇ ಗಲ್ವಾನ್ ಘರ್ಷಣೆಗಳ ಬಳಿಕ ಆ ದೇಶದಿಂದ ಭಾರತದ ಆಮದುಗಳಲ್ಲಿ ತೀವ್ರ ಏರಿಕೆಯಾಗಿರುವುದನ್ನು ಅಧಿಕೃತ ಅಂಕಿಅಂಶಗಳು ತೋರಿಸಿವೆ ಎಂದು indianexpress.com ವರದಿ ಮಾಡಿದೆ. ಗಲ್ವಾನ್ ಘರ್ಷಣೆಗಳಲ್ಲಿ 20 ಭಾರತೀಯ ಯೋಧರು ಕೊಲ್ಲಲ್ಪಟ್ಟಿದ್ದರು.

ಎರಡನೇ ಅತಿ ದೊಡ್ಡ ವ್ಯಾಪಾರ ಪಾಲುದಾರ
ಅಮೆರಿಕದ ನಂತರ ಚೀನಾ ಭಾರತದ ಎರಡನೇ ಅತಿ ದೊಡ್ಡ ವ್ಯಾಪಾರ ಪಾಲುದಾರನಾಗಿದೆ. 2021-22ರಲ್ಲಿ ಭಾರತ-ಚೀನಾ ದ್ವಿಪಕ್ಷೀಯ ವ್ಯಾಪಾರವು 115.83 ಶತಕೋಟಿ ಡಾ.ಗಳಾಗಿದ್ದು, ಇದು 1,035 ಶತಕೋಟಿ ಡಾ.ಗಳ ಭಾರತದ ಒಟ್ಟು ವ್ಯಾಪಾರದ ಶೇ.11.19ರಷ್ಟಿದೆ. ಅಮೆರಿಕ ಶೇ.11.54 (119.48 ಶತಕೋಟಿ ಡಾ.) ಪಾಲನ್ನು ಹೊಂದಿದೆ.

20 ವರ್ಷಗಳ ಹಿಂದಿನವರೆಗೂ ಚೀನಾ 10 ಅಥವಾ ಅದಕ್ಕಿಂತ ಕೆಳಗಿನ ಸ್ಥಾನದಲ್ಲಿತ್ತು. ಆದರೆ 2002-2003ರಿಂದ ಚೀನಾ ಭಾರತದೊಂದಿಗೆ ತನ್ನ ವ್ಯಾಪಾರದ ಪಾಲನ್ನು ಹೆಚ್ಚಿಸುತ್ತ ಬಂದಿದ್ದು,2011-12ರಲ್ಲಿ ಅಗ್ರಗಣ್ಯ ವ್ಯಾಪಾರ ಪಾಲುದಾರನಾಗಿತ್ತು. ಮುಂದಿನ ವರ್ಷ ಯುಎಇ ಚೀನಾವನ್ನು ಎರಡನೇ ಸ್ಥಾನಕ್ಕೆ ತಳ್ಳಿತ್ತು. ಆದರೆ ಪುಟಿದೆದ್ದ ಚೀನಾ 2013-14ರಲ್ಲಿ ಮತ್ತೆ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿತ್ತು ಮತ್ತು 2017-18ರವರೆಗೂ ಆ ಸ್ಥಾನದಲ್ಲಿತ್ತು. ಮುಂದಿನ ಎರಡು ವರ್ಷಗಳ (2018-20) ಕಾಲ ಅಮೆರಿಕ ನಂ.1 ವ್ಯಾಪಾರ ಪಾಲುದಾರನಾಗಿತ್ತು,ಆದರೆ 2020-21ರಲ್ಲಿ ಚೀನಾ ಮತ್ತೊಮ್ಮೆ ನಂ.1 ಸ್ಥಾನಕ್ಕೆ ಜಿಗಿದಿತ್ತು.

ಇತ್ತೀಚಿನ ವರ್ಷಗಳಲ್ಲಿ ಚೀನಾ ಮತ್ತು ಅಮೆರಿಕ ಎರಡೂ ಭಾರತದ ಅಗ್ರ ವ್ಯಾಪಾರ ಪಾಲುದಾರ ದೇಶಗಳಾಗಿದ್ದರೂ, ಅವುಗಳೊಂದಿಗೆ ವ್ಯಾಪಾರದಲ್ಲಿ ಭಾರೀ ಅಂತರವಿದೆ. 2020-21ರಲ್ಲಿ ಭಾರತವು ಅಮೆರಿಕದೊಂದಿಗೆ 32.85 ಶತಕೋಟಿ ಡಾ.ಗಳ ಹೆಚ್ಚುವರಿ ವ್ಯಾಪಾರವನ್ನು ಹೊಂದಿದ್ದರೆ, ಚೀನಾದೊಂದಿಗೆ ಅದರ ವ್ಯಾಪಾರ ಕೊರತೆ 73.31 ಶತಕೋಟಿ ಡಾ.ಗಳಷ್ಟಿತ್ತು. ಇದು ಯಾವುದೇ ರಾಷ್ಟ್ರಕ್ಕೆ ಹೋಲಿಸಿದರೆ ಅತ್ಯಂತ ಹೆಚ್ಚು. ವಾಸ್ತವದಲ್ಲಿ 2021-22ರಲ್ಲಿ ಚೀನಾದೊಂದಿಗೆ ಭಾರತದ ವ್ಯಾಪಾರ ಕೊರತೆ ಹಿಂದಿನ ವರ್ಷದ (44.02 ಶತಕೋಟಿ ಡಾ.) ದುಪ್ಪಟ್ಟಾಗಿತ್ತು ಮತ್ತು ಇದು ಸಾರ್ವಕಾಲಿಕ ಗರಿಷ್ಠವಾಗಿತ್ತು.

2021-22ರಲ್ಲಿ ಅಮೆರಿಕ ಮತ್ತು ಚೀನಾದ ಜೊತೆಗೆ ಭಾರತದ ಅಗ್ರ 10 ವ್ಯಾಪಾರ ಪಾಲುದಾರರಲ್ಲಿ ಯುಎಇ,ಸೌದಿ ಅರೇಬಿಯ, ಇರಾಕ್, ಸಿಂಗಾಪುರ, ಹಾಂಗ್ಕಾಂಗ್, ಇಂಡೋನೇಶ್ಯಾ, ದ.ಕೊರಿಯಾ ಮತ್ತು ಆಸ್ಟ್ರೇಲಿಯಾ ಸೇರಿವೆ.

ವ್ಯಾಪಾರ ಕೊರತೆಯಲ್ಲಿ ತೀವ್ರ ಏರಿಕೆ
ಕಳೆದ 21 ವರ್ಷಗಳಲ್ಲಿ ಚೀನಾದೊಂದಿಗೆ ಭಾರತದ ವ್ಯಾಪಾರ ಕೊರತೆ ಒಂದು ಶತಕೋಟಿ ಡಾ.ನಿಂದ 73 ಶತಕೋಟಿ ಡಾ.ಗೆ ಏರಿಕೆಯಾಗಿದೆ. ಆದರೆ ಈ ಅವಧಿಯಲ್ಲಿ ಚೀನಾಕ್ಕೆ ಭಾರತದ ರಪ್ತುಗಳು ಸುಮಾರು ಒಂದು ಶತಕೋಟಿ ಡಾ.ನಿಂದ 21 ಶತಕೋಟಿ ಡಾ.ಗೆ ಆಮೆಗತಿಯಲ್ಲಿ ಏರಿಕೆಯಾಗಿವೆ. ರಫ್ತಿಗಿಂತ ಆಮದು ಹೆಚ್ಚುತ್ತಲೇ ಬಂದಿರುವುದು ಚೀನಾದೊಂದಿಗೆ ಭಾರತದ ವ್ಯಾಪಾರ ಕೊರತೆಯಲ್ಲಿ ಏರಿಕೆಗೆ ಕಾರಣವಾಗಿದೆ.

ಈ ವರ್ಷ ವ್ಯಾಪಾರ ಕೊರತೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ. ಹಾಲಿ ವಿತ್ತವರ್ಷ (2022-23)ದ ಮೊದಲ ಏಳು ತಿಂಗಳುಗಳಲ್ಲಿ (ಎಪ್ರಿಲ್-ಅಕ್ಟೋಬರ್) ವ್ಯಾಪಾರ ಕೊರತೆ 51 ಶತಕೋಟಿ ಡಾ.ಆಗಿದ್ದು,ಇದು ಕಳೆದ ವಿತ್ತವರ್ಷದ ಇದೇ ಅವಧಿಯ 37 ಶತಕೋಟಿ ಡಾ.ಗೆ ಹೋಲಿಸಿದರೆ ಶೇ.39ರಷ್ಟು ಅಧಿಕವಾಗಿದೆ. ವಾಸ್ತವದಲ್ಲಿ 2021-22ರಲ್ಲಿ ಭಾರತದ ಒಟ್ಟು ವ್ಯಾಪಾರ ಕೊರತೆಯ (191 ಶತಕೋಟಿ ಡಾ.) ಮೂರನೇ ಒಂದು ಪಾಲು ಚೀನಾದ ಜೊತೆಯಿತ್ತು. ಎರಡು ದಶಕಗಳ ಹಿಂದೆ ಒಟ್ಟು ದ್ವಿಪಕ್ಷೀಯ ವ್ಯಾಪಾರದ ಸುಮಾರು ಶೇ.60ರಷ್ಟಿದ್ದ ಚೀನಾದಿಂದ ಭಾರತದ ಆಮದು ಈಗ ಶೇ.80ನ್ನು ಮೀರಿದೆ.

ಗಲ್ವಾನ್ ಘರ್ಷಣೆಗಳ ಬಳಿಕ ಆಮದುಗಳಲ್ಲಿ ಗಣನೀಯ ಏರಿಕೆ 
ಕೋವಿಡ್ ಲಾಕ್ಡೌನ್ ಸಂದರ್ಭ 2020 ಜೂನ್ನಲ್ಲಿ 3.32 ಶತಕೋಟಿ ಡಾ.ಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಚೀನಾದಿಂದ ಮಾಸಿಕ ಆಮದುಗಳು ನಿರ್ಬಂಧಗಳ ಸಡಿಲಿಕೆಯ ಬಳಿಕ ಹೆಚ್ಚಲು ಆರಂಭಗೊಂಡಿದ್ದು,ಮುಂದಿನ ತಿಂಗಳು (2020,ಜುಲೈ) 5.58 ಶತಕೋಟಿ ಡಾ.ಗೆ ಏರಿಕೆಯಾಗಿತ್ತು. ಆಗಿನಿಂದ ಅದು ಹೆಚ್ಚುತ್ತಲೇ ಇದ್ದು,ಈ ವರ್ಷದ ಜುಲೈನಲ್ಲಿ 10.24 ಶತಕೋಟಿ ಡಾ.ಗಳ ಹೊಸ ಎತ್ತರಕ್ಕೇರಿತ್ತು.

2020-21ರಲ್ಲಿ 5.43 ಶತಕೋಟಿ ಡಾ.ಇದ್ದ ಚೀನಾದಿಂದ ಸರಾಸರಿ ಮಾಸಿಕ ಆಮದು 2021-22ರಲ್ಲಿ 7.88 ಶತಕೋಟಿ ಡಾ.ಗೆ ಏರಿಕೆಯಾಗಿದೆ.

ಭಾರತವು ಚೀನಾದಿಂದ ಏನು ಖರೀದಿಸುತ್ತಿದೆ?
2021-22ರಲ್ಲಿ ಭಾರತದ ಒಟ್ಟು 613,05 ಶತಕೋಟಿ ಡಾ.ಆಮದುಗಳಲ್ಲಿ ಶೇ.15.42 (94.57 ಶತಕೋಟಿ ಡಾ.) ಚೀನಾದಿಂದ ಬಂದಿದ್ದವು. ವಿದ್ಯುತ್ ಯಂತ್ರೋಪಕರಣಗಳು ಮತ್ತು ಸಾಧನಗಳು ಹಾಗೂ ಬಿಡಿಭಾಗಗಳು, ಸೌಂಡ್, ಟಿವಿ ಇಮೇಜ್ ಮತ್ತು ಸೌಂಡ್ ರೆಕಾರ್ಡರ್ಗಳು ಹಾಗೂ ಬಿಡಿಭಾಗಗಳು, ಪರಮಾಣು ರಿಯಾಕ್ಟರ್ಗಳು, ಬಾಯ್ಲರ್ಗಳು, ಯಂತ್ರೋಪಕರಣಗಳು ಮತ್ತು ಬಿಡಿಭಾಗಗಳು, ಆರ್ಗಾನಿಕ್ ರಾಸಾಯನಿಕಗಳು, ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ವಸ್ತುಗಳು ಹಾಗೂ ರಸಗೊಬ್ಬರಗಳು ಚೀನಾದಿಂದ ಆಮದಾಗುತ್ತಿರುವ ಪ್ರಮುಖ ಸರಕುಗಳಲ್ಲಿ ಸೇರಿವೆ.

ಚೀನಾ ಭಾರತದಿಂದ ಏನು ಖರೀದಿಸುತ್ತಿದೆ?
2021-22ರಲ್ಲಿ ಭಾರತದಿಂದ ಚೀನಾಕ್ಕೆ ರಫ್ತುಗಳ ಮೌಲ್ಯ 21.25 ಶತಕೋಟಿ ಡಾ.ಆಗಿದ್ದು, ಇದು ಅದರ ಒಟ್ಟು ರಫ್ತುಗಳ (422 ಶತಕೋಟಿ ಡಾ.) ಶೇ.5ರಷ್ಟಿತ್ತು. ಅದಿರುಗಳು, ಕಿಟ್ಟ ಮತ್ತು ಭಸ್ಮ, ಆರ್ಗಾನಿಕ್ ರಾಸಾಯನಿಕಗಳು, ಖನಿಜ ಇಂಧನಗಳು, ಖನಿಜ ತೈಲಗಳು, ಬಿಟುಮಿನಸ್ ವಸ್ತುಗಳು, ಖನಿಜ ಮೇಣ, ಕಬ್ಬಿಣ ಮತ್ತು ಉಕ್ಕು, ಅಲ್ಯುಮಿಯಂ, ಹತ್ತಿ, ಹಗುರ ನಾಫ್ತಾ ಇತ್ಯಾದಿಗಳು ಭಾರತದಿಂದ ಚೀನಾಕ್ಕೆ ರಫ್ತಾದ ಪ್ರಮುಖ ಸರಕುಗಳಲ್ಲಿ ಸೇರಿವೆ.

ಕೃಪೆ: indianexpress.com

share
Next Story
X