ಮೊದಲ ಟೆಸ್ಟ್: ಬಾಂಗ್ಲಾದೇಶ 150 ರನ್ ಗೆ ಆಲೌಟ್, ಭಾರತಕ್ಕೆ ಭರ್ಜರಿ ಮುನ್ನಡೆ

ಢಾಕಾ: ಕುಲದೀಪ್ ಯಾದವ್(5-40) ಹಾಗೂ ಮುಹಮ್ಮದ್ ಸಿರಾಜ್(3-20) ಶಿಸ್ತುಬದ್ದ ಬೌಲಿಂಗ್ ದಾಳಿಗೆ ತತ್ತರಿಸಿದ ಆತಿಥೇಯ ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯದಲ್ಲಿ ತನ್ನ ಮೊದಲ ಇನಿಂಗ್ಸ್ ನಲ್ಲಿ ಕೇವಲ 150 ರನ್ ಗೆ ಆಲೌಟಾಗಿದೆ.
ಇದರೊಂದಿಗೆ ಭಾರತವು ಮೊದಲ ಇನಿಂಗ್ಸ್ ನಲ್ಲಿ 254 ರನ್ ಮುನ್ನಡೆ ಪಡೆದಿದೆ. ಭೋಜನವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿರುವ ಭಾರತವು ಒಟ್ಟು 290 ರನ್ ಮುನ್ನಡೆಯಲ್ಲಿದೆ.
ಬಾಂಗ್ಲಾದ ಬ್ಯಾಟಿಂಗ್ ನಲ್ಲಿ ಮುಶ್ಫಿಕುರ್ರಹೀಂ (28 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು.
ಭಾರತವು ಚೇತೇಶ್ವರ ಪೂಜಾರ(90) ಹಾಗೂ ಶ್ರೇಯಸ್ ಅಯ್ಯರ್(86 ರನ್)ಅರ್ಧಶತಕದ ಕೊಡುಗೆಯ ಸಹಾಯದಿಂದ ಮೊದಲ ಇನಿಂಗ್ಸ್ ನಲ್ಲಿ 404 ರನ್ ಗಳಿಸಿ ಆಲೌಟಾಗಿದೆ.
ಭಾರತದ ಹಂಗಾಮಿ ನಾಯಕ ಕೆ.ಎಲ್. ರಾಹುಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು.
That's Lunch on Day 3 of the first #BANvIND Test! #TeamIndia 36/0 & lead Bangladesh by 290 runs
— BCCI (@BCCI) December 16, 2022
We will be back for the Second Session shortly.
Scorecard https://t.co/CVZ44NpS5m pic.twitter.com/TBTGbYCVMh