ಡಿ.18ರಂದು ಸಾಮೂಹಿಕ ವಿವಾಹ

ಮಂಗಳೂರು,ಡಿ.16: ಎಸ್‌ವೈಎಸ್ ಕೆ.ಸಿ.ರೋಡ್ ಸೆಂಟರ್ ವತಿಯಿಂದ 11ನೆ ವರ್ಷದ 5 ಜೋಡಿ ಸಾಮೂಹಿಕ ವಿವಾಹವು ಡಿ.18ರಂದು ಬೆಳಗ್ಗೆ 10ಕ್ಕೆ ಕೋಟೆಕಾರ್ ನೂರ್‌ಮಹಲ್‌ನಲ್ಲಿ ನಡೆಯಲಿದೆ. ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ನೇತೃತ್ವ ವಹಿಸಲಿದ್ದು, ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಎಂಎಸ್‌ಎಂ ಝೈನಿ ಅಲ್ ಕಾಮಿಲ್ ಮತ್ತು ಮುನೀರ್ ಸಖಾಫಿ ಅಲ್ ಫುರ್ಖಾನ್ ಮುಖ್ಯ ಭಾಷನ ಮಾಡಲಿದ್ದಾರೆ ಎಂದು ಮ್ಯಾರೇಜ್ ಸೆಲ್‌ನ ಸಂಚಾಲಕ ಎನ್.ಎಸ್. ಉಮರ್ ಮಾಸ್ಟರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





