ಆಂಧ್ರ: ಟಿಡಿಪಿ, ವೈಎಸ್‌ಆರ್‌ಸಿಪಿ ಕಾರ್ಯಕರ್ತರ ನಡುವೆ ಘರ್ಷಣೆ; ವಾಹನ, ಮನೆಗಳಿಗೆ ಬೆಂಕಿ
ಮಾಚೆರ್ಲಾ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ

ಅಮರಾವತಿ : ಕಾರ್ಯಕ್ರಮದ ಅಂಗವಾಗಿ ವಿರೋಧ ಪಕ್ಷವು ಆಯೋಜಿಸಿದ್ದ ರ್ಯಾಲಿಯಲ್ಲಿ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ತೆಲುಗು ದೇಶಂ ಪಕ್ಷದ ಕಾರ್ಯಕರ್ತರ ನಡುವಿನ ಘರ್ಷಣೆಯ ಹಿನ್ನೆಲೆಯಲ್ಲಿ ಪಲ್ನಾಡು ಜಿಲ್ಲೆಯ ಮಾಚೆರ್ಲಾ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ತನ್ನ ನಾಯಕರ ವಾಹನಗಳು ಹಾಗೂ ಮನೆಗಳಿಗೆ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ ಎಂದು ಟಿಡಿಪಿ ಆರೋಪಿಸಿದೆ.
ಕೆಲವು ಅಪರಿಚಿತ ವ್ಯಕ್ತಿಗಳು ವಾಹನಗಳಿಗೆ ಬೆಂಕಿ ಹಚ್ಚುವುದು ಹಾಗೂ ಮನೆಗಳ ಮೇಲೆ ದಾಳಿ ಮಾಡುವುದನ್ನು ಟಿವಿ ದೃಶ್ಯಗಳಲ್ಲಿ ಕಂಡುಬಂದಿವೆ. ಗುಂಪೊಂದು ನೆಲಕ್ಕೆ ಬಿದ್ದ ವ್ಯಕ್ತಿಯನ್ನು ಥಳಿಸುತ್ತಿರುವ ವೀಡಿಯೋ ಕ್ಲಿಪ್ ವೈರಲ್ ಆಗಿದೆ.
ಪಲ್ನಾಡು ಪೊಲೀಸ್ ವರಿಷ್ಠಾಧಿಕಾರಿ ವೈ ರವಿಶಂಕರ ರೆಡ್ಡಿ ಮಾತನಾಡಿ, ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಘರ್ಷಣೆ ನಿರತ ಗುಂಪನ್ನು ಚದುರಿಸಿದ್ದಾರೆ ಎಂದರು.
ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಕೆಲವರು ಮಾಚೆರ್ಲಾ ಪಟ್ಟಣದಲ್ಲಿ ಆಶ್ರಯ ಪಡೆದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಇಂದು ಮುಂಜಾನೆ ಶೋಧ ಕಾರ್ಯ ನಡೆಸಿದರು.
A violent clash erupted between ruling #YSRCP and opposition #TDP workers in Macherla of Palnadu Dist. Vehicle burning and stone pelting reported. Several injured. #AndhraPradesh pic.twitter.com/b55Xl8LV9F
— Ashish (@KP_Aashish) December 16, 2022







