ಮೈಕ್ ಅನ್ನು ಐಸ್‌ಕ್ರೀಂ ಎಂದು ಭಾವಿಸಿ ತಿನ್ನಲೆತ್ನಿಸಿದ ಮೊರೊಕ್ಕೊ ಗೋಲ್ ಕೀಪರ್ ಪುತ್ರ: ವೀಡಿಯೊ ವೈರಲ್

ಹೊಸ ದಿಲ್ಲಿ: ಮೊರೊಕ್ಕೊ ಗೋಲ್ ಕೀಪರ್ ಯಾಸಿನ್ ಬೌನೌ ( Yassine Bounou) ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಉಸಿರು ಬಿಗಿ ಹಿಡಿಯುವಂಥ ಹಲವಾರು ಗೋಲ್‌ಗಳನ್ನು ರಕ್ಷಿಸಿ ಫುಟ್‌ಬಾಲ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಅವರು ಶನಿವಾರ ಮೂರನೆಯ ಸ್ಥಾನಕ್ಕಾಗಿ ನಡೆಯಲಿರುವ ಕ್ರೊವೇಷಿಯಾ ವಿರುದ್ಧದ ಪಂದ್ಯದಲ್ಲಿ ಮತ್ತೆ ಗೋಲು ರಕ್ಷಣೆಯ ಹೊಣೆ ಹೊರಲಿದ್ದಾರೆ.
ಆದರೆ, ಸದ್ಯ ವಿಶ್ವಾದ್ಯಂತ ಸದ್ದು ಮಾಡುತ್ತಿರುವುದು ಅವರ ಗೋಲು ರಕ್ಷಣೆಯ ವಿಡಿಯೊಗಳಲ್ಲ, ಬದಲಿಗೆ ಅವರ ಪುತ್ರ ಮೈಕ್ ಅನ್ನು ಐಸ್ ಕ್ರೀಂ ಎಂದು ತಪ್ಪಾಗಿ ಭಾವಿಸಿ ಅದನ್ನು ತಿನ್ನಲೆತ್ನಿಸುತ್ತಿರುವ ವಿಡಿಯೊ. ಈ ಮುದ್ದುಗರೆಯುವಂಥ ಘಟನೆಯು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರೊಕ್ಕೊ ತಂಡವು ಪೋರ್ಚುಗಲ್ ತಂಡದ ವಿರುದ್ಧ ದಾಖಲಿಸಿದ ಐತಿಹಾಸಿಕ ವಿಜಯದ ನಂತರ ನಡೆದಿದೆ ಎಂದು indianexpress.com ವರದಿ ಮಾಡಿದೆ.
ಕ್ವಾರ್ಟರ್ ಫೈನಲ್ ವಿಜಯದ ನಂತರ ಯಾಸಿನ್ ಅವರನ್ನು ಸಂದರ್ಶಿಸಲು ವರದಿಗಾರನೊಬ್ಬ ಅವರ ಮುಂದೆ ಮೈಕ್ ಹಿಡಿದ ಕೂಡಲೇ ಅದರ ಮೇಲಿನ ನೇರಳೆ ಬಣ್ಣದ ಹೊದಿಕೆಯನ್ನು ಚೀಪಲು ಯಾಸಿನ್ ಪುತ್ರ ಮುಂದಾಗಿದ್ದಾನೆ. ಈ ದೃಶ್ಯವು ವಿಶ್ವಾದ್ಯಂತ ಇರುವ ಫುಟ್‌ಬಾಲ್ ಪ್ರೇಮಿಗಳನ್ನು ಮೋಡಿ ಮಾಡಿದೆ.
ಈ ನಡುವೆ ಯಾಸಿನ್ ಬೌನೌ ಅವರ ಫುಟ್‌ಬಾಲ್ ಪಯಣವು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಯೌವನದ ವೃತ್ತಿಜೀವನವು ಭರವಸೆದಾಯಕವಾಗಿದ್ದರೂ ಅವರು ಮೊದಲಿಗೆ ಸ್ಪೇನ್‌ನ ಎರಡನೆ ದರ್ಜೆಯ ತಂಡದಲ್ಲಿ ಸ್ಥಾನ ಪಡೆಬೇಕಾಯಿತು. ನಂತರ ಸೆಲ್ವಿಯಾ ತಂಡಕ್ಕೆ ದೊಡ್ಡ ಮಟ್ಟದ ಪ್ರವೇಶ ಪಡೆದ ಅವರು, ತಮ್ಮ ಒಂದು ವರ್ಷದ ತಾತ್ಕಾಲಿಕ ಅವಧಿಯನ್ನು ಶಾಶ್ವತವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಅತ್ಯಂತ ವಿನಯದ ವ್ಯಕ್ತಿಯಾದ ಯಾಸಿನ್ ಬೌನೌ ದಾರಿಯುದ್ದಕ್ಕೂ ಕಠಿಣ ಸವಾಲುಗಳೇ ಇದ್ದವು. ಇನ್ನು ಮೊರೊಕ್ಕೊ ತಂಡದ ಬಗ್ಗೆ ಅವರಿಗೆ ಇನ್ನಿಲ್ಲದ ಪ್ರೀತಿ. ಅವರು ತಮ್ಮನ್ನು ತಂಡದ ನಾಲ್ಕನೆ ಆಟಗಾರನಾಗುವಂತೆ ಸಹಕರಿಸಿದ ಭೂತಕಾಲದ ಬಗ್ಗೆ ಹೆಚ್ಚು ಮಾತನಾಡದಿದ್ದರೂ, ಅವರೀಗ ಈ ಬಾರಿಯ ವಿಶ್ವಕಪ್‌ನ ಅತ್ಯುತ್ತಮ ಗೋಲು ರಕ್ಷಕರಾಗಿ ಹೊರಹೊಮ್ಮಿದ್ದಾರೆ. ಹಾಗೆಯೇ ಅವರ ನೈಸರ್ಗಿಕ ನಾಯಕತ್ವ ಗುಣವೂ ಬೆಳಕಿಗೆ ಬಂದಿದೆ.
Yassine Bounou's son thinking the to be is supremely adorable! #FIFAWorldCup pic.twitter.com/YTorvQwDvM
— FIFA World Cup (@FIFAWorldCup) December 14, 2022







