ಬಂಟ್ವಾಳ: ಮನೆಗೆ ಆಕಸ್ಮಿಕ ಬೆಂಕಿ; ಲಕ್ಷಾಂತರ ರೂ. ನಷ್ಟ

ಬಂಟ್ವಾಳ, ಡಿ.17: ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಕಳ್ಳಿಗೆ ಗ್ರಾಮ ದೇವಂದಬೆಟ್ಟು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ದೇವಂದಬೆಟ್ಟು ಸುಂದರಿ, ಶುಭ ಆನಂದ ಬಂಜನ್ ಎಂಬವರಿಗೆ ಸೇರಿರುವ ಹಂಚಿನ ಹಳೆಯ ಮನೆಗೆ ರಾತ್ರಿ ಸುಮಾರು 10:15ಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿದ್ದು ಎನ್ನಲಾಗಿದ್ದು, ಸುಮಾರು 6 ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಬಹುದು ಎಂದು ಅಂದಾಜಿಲಾಗಿದೆ.
ಹಳೆಯ ಶೈಲಿಯ ಮನೆಗೆ ಬೆಂಕಿ ತಗುಲಿದ್ದು ಸ್ಥಳಕ್ಕೆ ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪ್ರಭಾರ ಅಧಿಕಾರಿ ಪುರುಷೋತ್ತಮ, ರೋಹಿತ್, ಪ್ರಸಾದ್, ಗ್ರಹರಕ್ಷಕ ಸಿಬ್ಬಂದಿ ಜಯಗಣೇಶ್ ಚಾಲಕ ಕಿರಣ್ ಕುಮಾರ್ ರವರು ಭಾಗವಹಿಸಿದ್ದರು.
Next Story