ಪ್ರೇಮಾವತಿಗೆ ಬೆಂಗಳೂರು ವಿವಿ ಪಿಎಚ್‍ಡಿ ಪದವಿ

ಬೆಂಗಳೂರು, ಡಿ. 17: ನಗರದ ಸರಕಾರಿ ರಾಂ ನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೇಮಾವತಿ ಎಸ್.ಕೆ. ಅವರು ಮಂಡಿಸಿದ ‘ಬಸವಣ್ಣ ಮತ್ತು ಕುವೆಂಪು ಅವರ ಸಾಹಿತ್ಯದ ತಾತ್ವಿಕತೆ' ಎಂಬ ಪ್ರೌಢ ಪ್ರಬಂಧಕ್ಕೆ ಬೆಂಗಳೂರು ವಿವಿ ಪಿಎಚ್‍ಡಿ ಪದವಿ ನೀಡಿದೆ.
ಪ್ರೇಮಾವತಿ ಅವರಿಗೆ ಕೆ.ಆರ್.ಪುರ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಡಾ.ಪ್ರಸಾದಸ್ವಾಮಿ ಎಸ್.ಅವರು ಮಾರ್ಗದರ್ಶಕರಾಗಿದ್ದರು ಎಂದು ಪ್ರಕಟನೆ ತಿಳಿಸಿದೆ.
Next Story





