ಜೈಪುರ ತಂಡಕ್ಕೆ ಪ್ರೊ ಕಬಡ್ಡಿ ಲೀಗ್ ಟ್ರೋಫಿ
ಫೈನಲ್‌ನಲ್ಲಿ ಪುಣೇರಿ ವಿರುದ್ಧ ರೋಚಕ ಜಯ

ಫೈನಲ್‌ನಲ್ಲಿ ಪುಣೇರಿ ವಿರುದ್ಧ ರೋಚಕ ಜಯ
ಹೊಸದಿಲ್ಲಿ, ಡಿ.17: ಪುಣೇರಿ ಪಲ್ಟನ್ ತಂಡವನ್ನು 33-29 ಅಂಕಗಳ ಅಂತರದಿಂದ ಮಣಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಟ್ರೋಫಿ ಗೆದ್ದುಕೊಂಡಿದೆ.
2014ರ ಮೊದಲ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಜೈಪುರ ಇದೀಗ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪುಣೇರಿ ತಂಡದ ಚೊಚ್ಚಲ ಪ್ರಶಸ್ತಿ ಕನಸು ಈಡೇರಲಿಲ್ಲ.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿರುವ ಜೈಪುರದ ಪರ ಅರ್ಜುನ್ ದೇಶ್ವಾಲ್, ಸುನೀಲ್ ಕುಮಾರ್ ಹಾಗೂ ಅಜಿತ್ ಕುಮಾರ್ ತಲಾ 6 ಅಂಕ ಗಳಿಸಿ ಗೆಲುವಿಗೆ ನೆರವಾದರು. ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ಪುಣೆಯ ಪರ ಆದಿತ್ಯ ಶಿಂಧೆ 5 ಹಾಗೂ ಆಕಾಶ್ ಶಿಂಧೆ 4 ಅಂಕ ಗಳಿಸಿದರು.
Next Story