ಮಂಗಳೂರು: ಡಿ.19ರಿಂದ ʼಲ್ಯಾಂಡ್ ಟ್ರೇಡ್ಸ್ ಪ್ರಾಪರ್ಟಿ ಶೋ 2022ʼ
ಲ್ಯಾಂಡ್ ಟ್ರೇಡ್ಸ್ ಸಂಸ್ಥೆಗೆ ಕ್ರಿಸಿಲ್ ಮಾನ್ಯತೆ

ಮಂಗಳೂರು: ಮಂಗಳೂರಿನ ಪ್ರಮುಖ ಪ್ರಾಪರ್ಟಿ ಡೆವಲಪರ್ ಲ್ಯಾಂಡ್ ಟ್ರೇಡ್ ಸಂಸ್ಥೆಯು, ಹೊಸ ತಲೆಮಾರಿನ ಆಶಯಕ್ಕೆ ಅನುಗುಣವಾದ ನೂತನ ಪರಿಕಲ್ಪನೆಯ ಶೈಲಿಯ ಅಪಾರ್ಟ್ ಮೆಂಟ್‌ಗಳ ಸರಣಿಯನ್ನು ಅನುಷ್ಠಾನ ಗೊಳಿಸಿದೆ. ಈ ಎಲ್ಲಾ ವಿನೂತನ ಯೋಜನೆಗಳ ವಿವರಗಳನ್ನು ಗ್ರಾಹಕರಿಗೆ ಒಂದೇ ಸೂರಿನಡಿ, ಒದಗಿಸಲು ಡಿಸೆಂಬರ್ 19 ರಿಂದ 22 ರವರೆಗೆ ಲ್ಯಾಂಡ್ ಟ್ರೇಡ್ಸ್ ಪಾಪರ್ಟಿ ಶೋ ಏರ್ಪಡಿಸಲಾಗಿದೆ.
ಮಂಗಳೂರಿನ ಬಲ್ಮಠದ ಕಲೆಕ್ಟರ್ ಗೇಟ್ ಬಳಿಯ ಲ್ಯಾಂಡ್ ಟ್ರೇಡ್ಸ್ನ ವಾಣಿಜ್ಯ ಹೆಗ್ಗುರುತು ಮೈಲ್ ಸ್ಟೋನ್ - ವಾಣಿಜ್ಯ ಸಂಕೀರ್ಣದಲ್ಲಿ ಜರಗುವ ಈ ಮೇಳವು ಲ್ಯಾಂಡ್ ಟ್ರೇಡ್ ಬಿಲ್ಲರ್ ಆ್ಯಂಡ್ ಡೆವೆಲಪನ ಯಶಸ್ವೀ 30 ವರ್ಷಗಳ ಆಚರಣೆಯು ಆಗಲಿದೆ ಎಂದು ಸಂಸ್ಥೆಯ ಮಾಲಕ ಶ್ರೀನಾಥ ಹೆಬ್ಬಾರ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಅಪಾರ್ಟ್ ಮೆಂಟ್ಸ್ ಖರೀದಿಸ ಬಯಸುವ ಗ್ರಾಹಕರು ಬೆಳಗ್ಗೆ 10 ರಿಂದ ಸಂಜೆ 7 ರ ತನಕ ಯಾವುದೇ ಸಮಯದಲ್ಲಿ ಈ ಮೇಳಕ್ಕೆ ಭೇಟಿ ನೀಡಬಹುದು ಮತ್ತು ನೂತನ ಯೋಜನೆಗಳಲ್ಲಿನ ಖರೀದಿಗೆ ಆಕರ್ಷಕ ಕೊಡುಗೆಗಳನ್ನು ಪಡೆಯಬಹುದು.
ವೈಯಕ್ತಿಕ ಅಪಾರ್ಟ್ ಮೆಂಟ್ ಖರೀದಿಗೆ ಸ್ಥಳದಲ್ಲೇ ಕೊಡುಗೆ, ಪ್ರತೀ ಬುಕಿಂಗ್‌ನಲ್ಲಿ ಚಿನ್ನದ ನಾಣ್ಯ, ಶೂನ್ಯ ಜೆ.ಎಸ್.ಟಿ.ಗಳನ್ನು ಆಯ್ದ ಯೋಜನೆಗಳಲ್ಲಿ ಮತ್ತು ಗೃಹ ಸಾಲದಲ್ಲಿ ಶೂನ್ಯ ನಿರ್ವಹಣಾ ಶುಲ್ಕದ ಸೌಲಭ್ಯಗಳನ್ನು ಗ್ರಾಹಕರು ಪಡೆಯಬಹು ದು. ಲ್ಯಾಂಡ್ ಟ್ರೇಡ್ಸ್ ಮೇಳದಲ್ಲಿರುವ ಹೋಂ ಲೋನ್ ಕೌಂಟರ್‌ಗಳ ಮೂಲಕ ಅರ್ಹ ಖರೀದಿದಾರರು ಪಡೆಯಬಹು ಎಂದು ಶ್ರೀನಾಥ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ವಸತಿ ಬಡಾವಣೆಗಳ ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಾ, ಲ್ಯಾಂಡ್ ಟ್ರೇಡ್ಸ್ ಸಂಖ್ಯೆಯು 2008 ರಲ್ಲಿ ಅಪಾಟ್ಮೆಂಟ್ ನಿರ್ಮಾಣಕ್ಕೆ ಮುಂದಾಯಿತು, ಪ್ರಥಮ ಯೋಜನೆ ಬಲ್ಮಠದ 'ವಿಕ್ಟೋ ರಿಯಾ' ಮಹತ್ವದ ಯಶಸ್ಸು ಗಳಿಸಿತು, ಬಳಿಕ ಕದ್ರಿ, ಕಂಬಳದಲ್ಲಿ ಮೌರಿಷ್ಕಾಪ್ಯಾಲೇಸ್, ಜೈಲ್ ರೋಡಿನಲ್ಲಿ ಸಾಯಿಗ್ರ್ಯಾಂಡ್ಯೂರ್, ಬೆಂದೂರ್ ವೆಲ್‌ನಲ್ಲಿ 'ಅಟ್ಲಾಂಟಿಸ್ ಮತ್ತು ರೂಪಾಲಿ', ನಗರದ ಅತ್ಯಂತ ಎತ್ತರದ ಕಟ್ಟಡಗಳಲ್ಲೊಂದಾದ ಹ್ಯಾಟ್ ಹಿಲ್ ನಲ್ಲಿ 32 ಮಹಡಿಗಳ 'ಸಾಲಿಟೇರ್'ನಂತಹ ಯೋಜನೆಗಳು ಲ್ಯಾಂಡ್ ಟ್ರೇಡ್ ಅಪಾರವಾದ ವಿಶ್ವಾಸಾರ್ಹತೆ ಮತ್ತು ಗ್ರಾಹಕರ ನಂಬಿಕೆಯನ್ನು ಒದಗಿಸಿಕೊಟ್ಟಿತು ಎಂದು ಲ್ಯಾಂಡ್ ಟ್ರೇಡ್ಸ್ ಮತ್ತು ಬಿಲ್ಡ್ ರ್ಸ್ ನ ಮಾಲಕ ಶ್ರೀನಾಥ್ ಹೆಬ್ಬಾರ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸಂಸ್ಥೆ ಸ್ಥಾಪನೆಯಾಗಿ 30 ವರ್ಷಗಳ ಆಚರಣೆಯ ಸಂದರ್ಭದಲ್ಲಿ ಲ್ಯಾಂಡ್ ಟ್ರೇಡ್ಸ್ ಆನನ್ಯ ಪರಂಪರೆ ರೂಪಿಸಿದೆ. ಸಂಸ್ಥೆಯು ಅತ್ಯಾಧುನಿಕ ಗಗನ ಚುಂಬಿಗಳು, ಸೂಪರ್, ಲಕ್ಷುರಿ ಮತ್ತು ಬಜೆಟ್ ಅಪಾರ್ಟ್ ಮೆಂಟ್ ಜತೆಯಲ್ಲಿ ವಾಣಿಜ್ಯ ಸಂಕೀರ್ಣಗಳು, ಬಡಾವಣೆಗಳ ಸಹಿತ 37 ಯಶಸ್ವೀ ಯೋಜನೆಗಳ ನಿರ್ಮಾಣದ ಗೌರವಕ್ಕೆ ಪ್ರಾಪ್ತವಾಗಿದೆ. ಸುಮಾರು 41.32 ಲಕ್ಷ ಚ.ಆಡಿ, ವಿಸ್ತೀರ್ಣದಲ್ಲಿ 3000+ ವಸತಿಗಳ ನಿರ್ಮಾಣವು ಅನನ್ಯವೆಂಬ ಮನ್ನಣೆಯನ್ನು ಗಳಿಸಿದೆ ಎಂದು ಶ್ರೀನಾಥ ಹೆಬ್ಬಾರ್ ತಿಳಿಸಿದ್ದಾರೆ.
ಗ್ರಾಹಕರ ಸಂಪೂರ್ಣ ನಂಬಿಕೆ ಮತ್ತು ವಿಶ್ವಾಸವನ್ನು ಗಳಿಸಿರುವುದೇ ಲ್ಯಾಂಡ್ ಟ್ರೇಡ್ಸ್‌ನ ಅಭೂತಪೂರ್ವ ಯಶಸ್ಸಿಗೆ ಕಾರಣವಾಗಿದೆ. ಪಾರದರ್ಶಕ ವ್ಯವಹಾರ ಪರಿಪೂರ್ಣ ದಾಖಲೆ ಪತ್ರಗಳ `ಒದಗಣೆ ಒಪ್ಪಂದದ ಸಮಗ್ರ ಅನುಷ್ಠಾನ ಸಕಾಲದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವ ಕಾರ್ಯದಲ್ಲಿ ನಮ್ಮ ಪೂರ್ಣ ಬದ್ಧತೆ ಹೊಂದಿದೆ. ನಾವು ಬದ್ಧತೆಯಿಂದ, ಈಡೇರಿಸುತ್ತೇವೆ" ಎನ್ನುತ್ತಾರೆ ಲ್ಯಾಂಡ್ ಟ್ರೇಡ್ ಸಂಸ್ಥೆಯ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್.
ಸರ್ವೋತ್ಕೃಷ್ಟ ಗುಣಮಟ್ಟ: ಕ್ರಿಸಿಲ್ ಮಾನ್ಯತೆ
ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯು ಕ್ರಿಸಿಲ್‌ನ 'ಡಿಎ' ರಿಯಲ್ ಎಸ್ಟೇಟ್ ಡೆವೆಲಪ ರೇಟಿಂಗ್ ಪಡೆದು ಐ.ಎಸ್.ಪಿ: 9001:2015 ಮಾನ್ಯತೆ ಹೊಂದಿದೆ. ಸಂಸ್ಥೆಯ ಸಾಲಿಟೇರ್, ಸಾಯಿ ಗ್ರಾಂಡ್ಯೂರ್ , ಔರೇನಿಯಾ, ಮೌರಿಷ್ಕಾ ಪ್ಯಾಲೇಸ್, ಅಟ್ಲಾಂಟಿಸ್ ನಂತ ಪೂರ್ಣಗೊಂಡ ಯೋಜನೆಗಳು ಕೂಡಾ ಕ್ರಿಸಿಲ್‌ನ ಮಾನ್ಯತೆಗೆ ಪಾತ್ರವಾಗಿದೆ. ಬೃಹತ್ ಯೋಜನೆಗಳನ್ನು ನಿರ್ವಹಿಸುವ ಎಗ್ರೇಡ್ ಮಾನ್ಯತೆಯ ಎಂಫಾರ್, ಕನಕ್ಷನ್ಸ್ ನಂತಹ ಕಂಟ್ಯಾಕ್ಟರ್ ಸಂಸ್ಥೆಗಳಿಗೆ ಲ್ಯಾಂಡ್ ಟ್ರೇಡ್ ನಿರ್ಮಾಣ ಕಾರ್ಯವನ್ನು ವಹಿಸುತ್ತಿದೆ. ನಿರ್ಮಾಣ ಮತ್ತು ಸೊತ್ತುಗಳ ಅಭಿವೃದ್ಧಿಗೆ ಗುಣಮಟ್ಟ ದೃಢೀಕೃತ ಬ್ರ್ಯಾಂಡೆಡ್ ಉತ್ಪನ್ನಗಳನ್ನೇ ಬಳಸುತ್ತಿದೆ. ಪೂರ್ಣಗೊಂಡ ಯೋಜನೆಗಳಿಗೆ ಅಂತರಾಷ್ಟ್ರೀಯ ಖ್ಯಾತಿಯ ಕ್ರಿಸಿಲ್ ನಂತಹ, ಬಾಹ್ಯ ಸಂಸ್ಥೆಗಳಿಂದಲೇ ಗುಣಮಟ್ಟ ದೃಢೀಕರಣ ಪಡೆಯುವ ಮಂಗಳೂರಿನ ಏಕೈಕ ಸಂಸ್ಥೆ - ಲ್ಯಾಂ ಟ್ರೇಡ್ಸ್ನ ಹಿರಿಮೆ ಸಮಾಜದ ವಿವಿಧ ಕ್ಷೇತ್ರಗಳ ಗ್ರಾಹಕರ ಪೂರ್ಣ ಸಂತೃಪ್ತಿಯಿಂದಾಗಿ ಖರೀದಿಯ ಮನರಾವರ್ತನೆ ನಡೆಸುವ ಇತರರಿಗೆ ಶಿಫಾರಸ್ಸು ಮಾಡುವ ಗ್ರಾಹಕ ಸಮೂಹವಿದೆ. ಪರಿಪೂರ್ಣ ದಾಖಲೆ ಪತ್ರ. ಸಂಪೂರ್ಣ ಸ್ವಾಮ್ಯದ ದಾಖಲೆ ನಿವಾಸ ಅನುಮತಿ ಪತ್ರ, ಸಮಯ ಪಾಲನೆಗಳಿಂದಾಗಿ ಮನೆ ಮಾಲಕರು ನಿರಾಳವಾಗಿರಲು ಸಾಧ್ಯವಾಗಿದೆ ಎಂದು ಶ್ರೀ ನಾಥ್ ತಿಳಿಸಿದ್ದಾರೆ.
ಲ್ಯಾಂಡ್ ಟ್ರೇಡ್ ಯೋಜನೆಗಳೆಲ್ಲ ಪರಿಸರ ಸ್ನೇಹಿಯಾಗಿರುತ್ತದೆ. ಈ ಹಸಿರು ಪ್ರದೇಶವನ್ನು ಉದ್ಯಾನ ಆಟದ ಅಂಗಣ, ಜಾಗಿಂಗ್ ಟ್ರ್ಯಾಕ್, ಮಕ್ಕಳ ಆಟದ ಅಂಗ ಇತ್ಯಾದಿ ಸಮಾನ ಉದ್ದೇಶಗಳಿಗೆ ಜಾಣೆಯಿಂದ ವಿನ್ಯಾಸಗೊಳಿಸಲಾಗುತ್ತದೆ. ಮಳೆ ನೀರು ಕೊಯ್ದು, ತ್ಯಾಜ್ಯ ಸಂಸ್ಕರಣ ಘಟಕ, ಆನ್ ಸೈಟ್ ನಿರ್ವಹಣಾ ವ್ಯವಸ್ಥೆಗಳಿಂದಾಗಿ ಪರಿಸರ ಸ್ನೇಹಿ ವ್ಯವಸ್ಥೆ ರೂಪುಗೊಳ್ಳುತ್ತದೆ. ಲ್ಯಾಂಡ್ ಟ್ರೇಡ್ ಕಟ್ಟಡ ವಿನ್ಯಾಸಗಳು ಸದಾ ವಾಸ್ತು ಅನುಗುಣವಾಗಿರುತ್ತದೆ ಎಂದು ಶ್ರೀನಾಥ್ ಹೆಬ್ಬಾರ್ ವಿವರಿಸುತ್ತಾರೆ.
ಲ್ಯಾಂಡ್ ಟ್ರೇಡ್ ಪ್ರಸಕ್ತ ಯೋಜನೆಗಳು
ಶಿವಭಾಗ್ :-
ಕದ್ರಿ-ಮಲ್ಲಿಕಟ್ಟೆ ಬಳಿಯ ಎತ್ತರದ ಪ್ರದೇಶ ಶಿವಭಾಗ ಯೋಜನೆಯು 54 ಅಂತಸ್ತುಗಳ, 112 ಅರಮನೆ ಸದೃಶ ಲಕ್ಷುರಿ ಹೋಮ್‌ಗಳ ಗಗನಚುಂಬಿ ರಮಣೀಯ ನಿಸರ್ಗ, ಅತ್ಮಾಧಾನಿಕ ಸೌಲಭ್ಯ ಹೊಂದಿದೆ.
*ಅಲ್ಟೂರ: ಬೆ೦ದೂರ್‌ವೆಲ್ ನಲ್ಲಿ 12 ಅಂತಸ್ತುಗಳ ಗಗನಚುಂಬಿ ಯೋಜನೆ: 2 ಮತ್ತು 3 ಬಿಹೆಚ್ಕೆ, ಡುಪ್ಲೆಕ್ಸ್ ಗಳ ಸಹಿತ 114 ಸೂಪರ್ ಡಿಲಕ್ ವಸತಿ ಯೋಜನೆ.
*ಸಾಲಿಟೇರ್ (ವಾಸಕ್ಕೆ ಸಿದ್ಧ): ಹ್ಯಾಟ್ ಹಿಲ್‌ನಲ್ಲಿ 32 ಅಂತಸ್ತುಗಳ 143 ಲಕ್ಷುರಿ ಅಪಾರ್ಟ್ ಮೆಂಟ್ ಮತ್ತು ಡುಪ್ಲೆಕ್ಸ್ ಗಳು ಅರಬ್ಬಿ ಸಮುದ್ರದ ವಿಹಂಗಮ ನೋಟ. (ಪೂರ್ಣಗೊಂಡ ಈ ಯೋಜನೆಯಲ್ಲಿ ಕೆಲವು 2 ಬಿ.ಹೆಚ್.ಕೆ. ಮಾತ್ರಲಭ್ಯವಿದೆ).
*ನಕ್ಷತ್ರ: -ಮಣ್ಣಗುಡ್ಡೆ, ಗಾಂಧೀನಗರದ ಪ್ರಶಾಂತ ಪರಿಸರದಲ್ಲಿ ಲಕ್ಸುರಿ ಅಪಾರ್ಟ್ ಮೆಂಟ್‌ಗಳ ಯೋಜನೆ 1 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕೆಲವೇ 2 ಬಿ.ಹೆಚ್ ಕೆ , ಮತ್ತು 4 ಬಿ.ಹೆಚ್ .ಕೆ, ಅಪಾರ್ಟ್ಮೆಂಟ್ ಲಭ್ಯ, *ಅದಿರ : -ಉರ್ವ ಮಾರಿಗುಡಿ ಸಮೀಪ ರೆಸಿಡೆನ್ಸಿಯಲ್ ಮತ್ತು ಕಮರ್ಷಿಯಲ್ ಸಂಕೀರ್ಣ, ಆಧುನಿಕ ಸೌಲಭ್ಯಗಳ 3 ಬಿ.ಹೆಚ್ .ಕೆ.ಲಭ್ಯ.
*ಕಾಮತ್ ಗಾರ್ಡನ್:- ಉಳ್ಳಾಲದ ಸುಂದರವಾದ ಹೊರ ವಲಯದಲ್ಲಿ 1.5 ಎಕರೆಯಲ್ಲಿ ಪೂರ್ಣ ಅಭಿವೃದ್ಧಿಗೊಂಡ 15 ಸ್ವತಂತ್ರ ಮನೆಗಳ ವಸತಿ ನಿವೇಶನಗಳು,
*ಹ್ಯಾಬಿಟ್ಯಾಟ್ ವನ್ 54 (ವಾಸಕ್ಕೆ ಸಿದ್ಧವಾಗಿದೆ): -ದೇರೆಬೈಲ್‌ನಲ್ಲಿ ಸುಲಭ ದರದಲ್ಲಿ 154 ಅಪಾರ್ಟ್ ಮೆಂಟ್ ಗಳಯೋಜನೆ, ಈ ಪೂರ್ಣಗೊಂಡ ಯೋಜನೆಯಲ್ಲಿ ಬೆರಳೆಣಿಕೆಯಷ್ಟು ಅಪಾರ್ಟ್ ಮೆಂಟ್‌ಗಳು ಲಭ್ಯ
*ಎಮರಾಲ್ಡ್ ಬೇ (ಪೂರ್ಣ ಅಭಿವೃದ್ಧಿಗೊಂಡಿದೆ): -ಸುರತ್ಕಲ್‌ನಲ್ಲಿ ಅರಬ್ಬಿ ಸಮುದ್ರ ಕಿನಾರೆಯಲ್ಲಿ ಮನರಂಜನಾ ಸೌಲಭ್ಯಗಳ ಸಹಿತ, ಸ್ವತಂತ್ರ ವಿಲ್ಲಾಗಳ ನಿರ್ಮಾಣಕ್ಕೆ ವಸತಿ ಬಡಾವಣೆಯಾಗಿದೆ ಎಂದು ಸಂಸ್ಥೆಯ ಸಿಇಒ ರಮಿತ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮನೋಹರ ಪ್ರಸಾದ್, ಇ ಫೆರ್ನಾಂಡಿಸ್ ಉಪಸ್ಥಿತರಿದ್ದರು.