ಕೆನಡಾ: ಸೈಬರ್ ವಂಚನೆ ಪ್ರಕರಣದಲ್ಲಿ ಭಾರತೀಯ ಮೂಲದ ವ್ಯಕ್ತಿ ಬಂಧನ

ಟೊರಂಟೊ: ಸೈಬರ್ ವಂಚನೆ ಪ್ರಕರಣದ ತನಿಖೆಯ ಭಾಗವಾಗಿ 33 ವರ್ಷದ ಭಾರತೀಯ ಕೆನಡಿಯನ್ ಪ್ರಜೆಯನ್ನು ಕೆನಡಾದ ಕಾನೂನು ಜಾರಿ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ.
ಅಂತರಾಷ್ಟ್ರೀಯ ಸೈಬರ್ ವಂಚನೆಯ ಈ ಜಾಲ ಎರಡು ಖಂಡಗಳಲ್ಲಿನ ಹಲವು ದೇಶಗಳಲ್ಲಿ ಹರಡಿದ್ದು ಭಾರತ ಮತ್ತು ಅಮೆರಿಕದಲ್ಲಿಯೂ ಕಾರ್ಯಾಚರಿಸುತ್ತಿತ್ತು. ಪ್ರಕರಣದ ಆರೋಪಿ ಜಯಂತ್ ಭಾಟಿಯಾ ಎಂಬಾತನ ನಿವಾಸದಲ್ಲಿ ಶೋಧ ನಡೆಸಿದಾಗ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ದಾಖಲೆಗಳು ಪತ್ತೆಯಾಗಿವೆ.
20,000ಕ್ಕೂ ಅಧಿಕ ಬಲಿಪಶುಗಳನ್ನು ಗುರಿಯಾಗಿಸಿಕೊಂಡ ‘ಅಂತರಾಷ್ಟ್ರೀಯ ತಾಂತ್ರಿಕ ಬೆಂಬಲ’ ಹಗರಣಕ್ಕೆ ಸಂಬಂಧಿಸಿ ಒಟ್ಟು 6 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
Next Story