ಇರಾನ್: ಬೆಲ್ಜಿಯಂನ ಮಾನವೀಯ ನೆರವು ಕಾರ್ಯಕರ್ತನಿಗೆ 28 ವರ್ಷ ಜೈಲು

ಟೆಹ್ರಾನ್: ಇರಾನ್ ನಲ್ಲಿ ಅಂತರಾಷ್ಟ್ರೀಯ ಮಾನವೀಯ ನೆರವು ಸಂಘಟನೆಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಬೆಲ್ಜಿಯಂನ ಒಲಿವರ್ ವಾನ್ಡೆಕಾಸ್ಟಲ್ ಗೆ 22 ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ.
ಒಲಿವರ್ ಸುಮಾರು 1 ವರ್ಷದಿಂದ ಇರಾನ್ ನಲ್ಲಿ ಬಂಧನಲ್ಲಿದ್ದರು. ಆದರೆ ಇವರ ವಿರುದ್ಧದ ಆರೋಪವೇನು ಎಂಬುದು ಸ್ಪಷ್ಟವಾಗಿಲ್ಲ.
ಒಲಿವರ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಆತನನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಬೆಲ್ಜಿಯಂ ಸರಕಾರ ಆಗ್ರಹಿಸಿತ್ತು. ಈ ಮಧ್ಯೆ, ಎರಡೂ ದೇಶಗಳ ನಡುವೆ ಕೈದಿಗಳ ವಿನಿಮಯಕ್ಕೆ ಆಸ್ಪದ ನೀಡುವ ಒಪ್ಪಂದವನ್ನು ಬೆಲ್ಜಿಯಂನ ಸಾಂವಿಧಾನಿಕ ನ್ಯಾಯಾಲಯ ಕಳೆದ ವಾರ ಅಮಾನತುಗೊಳಿಸಿತ್ತು.
Next Story