ಪುಣಚ - ಪರಿಯಾಲ್ತಡ್ಕ ರಿಫಾಯಿ ದಫ್ ಕಮಿಟಿ ವತಿಯಿಂದ ದಫ್ ಸ್ಪರ್ಧೆ: ಮಣಿಪುರ-ಕಟಪಾಡಿ ತಂಡಕ್ಕೆ ಪ್ರಶಸ್ತಿ

ವಿಟ್ಲ : ಪುಣಚ - ಪರಿಯಾಲ್ತಡ್ಕ ರಿಫಾಯಿ ದಫ್ ಕಮಿಟಿ ಇದರ 50 ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯ ಮಟ್ಟದ ದಫ್ ಸ್ಪರ್ದಾ ಕಾರ್ಯಕ್ರಮವು ಪರಿಯಲ್ತಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಪುಣಚ ಜುಮಾ ಮಸೀದಿ ಖತೀಬ್ ಬಿ.ಎಂ.ಮುಹಮ್ಮದ್ ದಾರಿಮಿ ಉದ್ಘಾಟಿಸಿದರು. ರಿಫಾಯಿ ದಫ್ಫ್ ಕಮಿಟಿ ಅಧ್ಯಕ್ಷ ಯು.ಟಿ. ಮುಹಮ್ಮದ್ ಅಲಿ ಅಧ್ಯಕ್ಷತೆ ವಹಿಸಿದ್ದರು.
ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ಬೆಂಗಳೂರು ನ್ಯಾಯವಾದಿ ಕಮಾಲ್ ಅಹ್ಮದ್, ಸಾಜ ಮತ್ತು ಸಾರ್ಯ ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಗೌಸಿಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷ ರಝಾಕ್ ಪಾಲಸ್ತಡ್ಕ, ಪರಿಯಾಲ್ತಡ್ಕ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಬಿ.ಕಾಂ, ಖತೀಬ್ ಹಸೈನಾರ್ ಫೈಝಿ, ಸದರ್ ಅಬೂಬಕ್ಕರ್ ಸಿದ್ದೀಕ್ ರಝ್ವಿ, ಎಂ.ಎಸ್.ಹಮೀದ್ ಮಣಿಲ, ಫಾರೂಕ್ ಹನೀಫಿ ಅಜ್ಜಿನಡ್ಕ, ಅಬ್ದುಲ್ ರಝಾಕ್ ಮದನಿ ಪರಿಯಾಲ್ತಡ್ಕ, ಇಸ್ಮಾಯಿಲ್ ನಾಟೆಕಲ್, ರಿಫಾಯಿ ದಫ್ಫ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ಕೋಶಾಧಿಕಾರಿ ಕಮರುದ್ದೀನ್ ಪುಣಚ, ಸದಸ್ಯರುಗಳಾದ ಹಾರಿಸ್ ಕಮಾಲ್ ಪುಣಚ, ಮುಹಮ್ಮದ್ ರಫೀಕ್, ಶಾಫಿ ದಾರಿಮಿ, ಅಬ್ದುಲ್ ರಝಾಕ್ ಹಾಜಿ, ನಝೀರ್ ಪೈಸಾರಿ, ಫಾರೂಕ್ ಪಾಲಸ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ಬೆಂಗಳೂರು ನ್ಯಾಯವಾದಿ ಕಮಾಲ್ ಅಹ್ಮದ್, ದ.ಕ.ಮತ್ತು ಉಡುಪಿ ಜಿಲ್ಲಾ ದಫ್ ಅಸೋಸಿಯೇಷನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ ಸಹಿತ ಸಂಸ್ಥೆಯ 50 ನೇ ವಾರ್ಷಿಕೋತ್ಸವದ ಪ್ರಯುಕ್ತ ಸಂಸ್ಥೆಯ ಹಿರಿಯ 50 ಸದಸ್ಯರನ್ನು ಸನ್ಮಾನಿಸಲಾಯಿತು.
13 ತಂಡಗಳು ಭಾಗವಹಿಸಿದ್ದ ರಾಜ್ಯ ಮಟ್ಟದ ದಫ್ಫ್ ಸ್ಪರ್ಧೆಯಲ್ಲಿ ಕಟಪಾಡಿ - ಮಣಿಪುರದ ಖಲಂದರ್ ಶಾ ದಫ್ ಸಮಿತಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಸುರತ್ಕಲ್ - ಕೃಷ್ಣಾಪುರದ ಲಜಿನತುಲ್ ಅನ್ಸಾರಿಯ ದಫ್ ಸಮಿತಿ ದ್ವಿತೀಯ ಹಾಗೂ ಕಾಪು - ಮಜೂರಿನ ಸಿರಾಜುಲ್ ಹುದಾ ದಫ್ಫ್ ಸಮಿತಿ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಕೃಷ್ಣಾಪುರ ತಂಡದ ಸೈಫುದ್ದೀನ್ ಹಾಗು ಶರಫುದ್ದೀನ್ ಉತ್ತಮ ಹಾಡುಗಾರ ಪ್ರಶಸ್ತಿಗೆ ಭಾಜನರಾದರು.
ಪರಿಯಾಲ್ತಡ್ಕ ಜುಮಾ ಮಸೀದಿ ಅಧ್ಯಕ್ಷ ಎಂ.ಎಸ್.ಮುಹಮ್ಮದ್ ಪ್ರಸ್ತಾವನೆಗೈದರು, ಎಂ.ಎಸ್. ಶಫೀಕ್ ಮಣಿಲ ಸ್ವಾಗತಿಸಿ, ನಝೀರ್ ಅಹ್ಮದ್ ಸಖಾಫಿ ಪರಿಯಾಲ್ತಡ್ಕ ಕಿರಾಅತ್ ಪಠಿಸಿದರು. ನೌಫಳ್ ಕುಡ್ತಮುಗೇರು ಹಾಗೂ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.