ಸಜಿಪ: 'ಎಚ್ಎಫ್ ಇಂಡಿಯಾ'ದಿಂದ ಅರ್ಹ ಕುಟುಂಬಕ್ಕೆ 26ನೇ ಮನೆ ಹಸ್ತಾಂತರ

ಮಂಗಳೂರು, ಡಿ.18: ಎಚ್ಎಫ್ ಇಂಡಿಯಾವು 'ಪ್ರಾಜೆಕ್ಟ್ ಆಶಿಯಾನ'ದ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ, ನಿರ್ಗತಿಕರಿಗೆ ಮನೆ ನಿರ್ಮಿಸಿ ಕೊಡುತ್ತಿದ್ದು, ಅದರಂತೆ ನಿರ್ಮಿಸಿದ 26ನೇ ಮನೆಯನ್ನು ಸಜಿಪ ಸಮೀಪದ ಗೋಳಿಪಡ್ಪು ಎಂಬಲ್ಲಿ ವಿಧವೆ ಫಲಾನುಭವಿಯೊಬ್ಬರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಹ್ಸಾನ್ ಮಸೀದಿಯ ಇಮಾಮ್ ಮೌಲಾನ ಅಲ್ತಾಫ್ ಅವರು ನೂತನ ಮನೆಯ ಕೀಲಿಕೈಯನ್ನು ಹಸ್ತಾಂತರಿಸಿದರು.
ಗೋಳಿಪಡ್ಪು ಜುಮಾ ಮಸೀದಿಯ ಅಧ್ಯಕ್ಷ ರಫೀಕ್, ಬೆಸ್ಟ್ ಪ್ಲೈವುಡ್ ಮಾಲಕ ಅಶ್ರಫ್ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಚ್ಎಫ್ ಇಂಡಿಯಾ ಅಧ್ಯಕ್ಷ ನಾಝಿಮ್ ಎ.ಕೆ. ಮಾತನಾಡಿ, ನೆಲ್ಯಾಡಿ ಸಮೀಪ ಆಶಿಯಾನದ 27 ಮತ್ತು 28ನೇ ಮನೆಯ ಕಾಮಗಾರಿ ಪ್ರಗತಿಯಲ್ಲಿದೆ. ಅತಿ ಶೀಘ್ರದಲ್ಲಿ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ತಸ್ಲೀಮ್, ಸಾಜಿದ್ ಸೌದಿ, ಸಿರಾಜ್ ಸಜಿಪ ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು.
ಆದಿಲ್ ಪರ್ವೇಝ್ ಕಿರಾಅತ್ ಪಠಿಸಿದರು. ಸಾಜಿದ್ ಎ.ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.