‘ಸಚಿನ್ ಪೈಲಟ್ರಂಥ ಸಿಎಂ ಬೇಕು...’: ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಎದುರೇ ಯುವಕರ ಘೋಷಣೆ
![‘ಸಚಿನ್ ಪೈಲಟ್ರಂಥ ಸಿಎಂ ಬೇಕು...’: ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಎದುರೇ ಯುವಕರ ಘೋಷಣೆ ‘ಸಚಿನ್ ಪೈಲಟ್ರಂಥ ಸಿಎಂ ಬೇಕು...’: ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಎದುರೇ ಯುವಕರ ಘೋಷಣೆ](https://www.varthabharati.in/sites/default/files/images/articles/2022/12/18/360539-1671364626.jpg)
ಹೊಸದಿಲ್ಲಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ 100 ದಿನಗಳನ್ನು ಪೂರೈಸಿದೆ. ರವಿವಾರ ರಾಹುಲ್ ಗಾಂಧಿ ರಾಜಸ್ಥಾನದ ದೌಸಾದಿಂದ ದಿನದ ಪಾದಯಾತ್ರೆಯನ್ನು ಆರಂಭಿಸುತ್ತಿದ್ದಂತೆ, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ಬೆಂಬಲಿಸುವ ನಿರೀಕ್ಷಿತ ಘೋಷಣೆಗಳು ಕೇಳಿಬಂದವು ಎಂದು ವರದಿಯಾಗಿದೆ.
ಸಚಿನ್ ಪೈಲಟ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡುವಿನ ಭಿನ್ನಾಭಿಪ್ರಾಯಗಳ ಊಹಾಪೋಹಗಳು ಆಡಳಿತ ಪಕ್ಷ ಕಾಂಗ್ರೆಸ್ ಅನ್ನು ಪ್ರತಿಸ್ಪರ್ಧಿ ಬಿಜೆಪಿಯಿಂದ ಆಗಾಗ್ಗೆ ಟೀಕೆಗೆ ಒಳಪಡಿಸಿದೆ
ಸುದ್ದಿ ಸಂಸ್ಥೆ ANI ಟ್ವೀಟ್ ಮಾಡಿದ ವೀಡಿಯೊವೊಂದರಲ್ಲಿ, ಪಕ್ಷದ ಧ್ವಜಗಳನ್ನು ಹಿಡಿದುಕೊಂಡಿದ್ದ ಕೆಲವು ಯುವಕರು: "ಸಚಿನ್ ಪೈಲಟ್ ಜಿಂದಾಬಾದ್. (ಸಚಿನ್ ಪೈಲಟ್ ಗೆ ಜಯವಾಗಲಿ). ಹಮಾರಾ ಸಿಎಂ ಕೈಸಾ ಹೋ? ಸಚಿನ್ ಪೈಲಟ್ ಜೈಸಾ ಹೋ. (ನಮ್ಮ ಮುಖ್ಯಮಂತ್ರಿ ಹೇಗಿರಬೇಕು? ಸಚಿನ್ ಪೈಲಟ್ ಹಾಗಿರಬೇಕು)" ಎಂದು ಘೋಷಣೆ ಕೂಗಿದ್ದಾರೆ.
ಕ್ಲಿಪ್ನ ಸತ್ಯಾಸತ್ಯತೆಯನ್ನು "ಹಿಂದೂಸ್ತಾನ್ ಟೈಮ್ಸ್'' ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ.
ಕಾಂಗ್ರೆಸ್ ನ ಬೃಹತ್ ಪಾದಯಾತ್ರೆ ಸಾಗುತ್ತಿರುವ 8ನೇ ರಾಜ್ಯ ರಾಜಸ್ಥಾನವಾಗಿದೆ. ಇದು ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ನಡೆಯಲಿದೆ.
#WATCH | Congress party's Bharat Jodo Yatra resumed from Kalakho, Dausa in Rajasthan this morning.
— ANI (@ANI) December 18, 2022
Some youths, participating in the yatra, were seen raising slogans of 'Sachin Pilot zindabad' and 'Hamara CM kaisa ho? Sachin Pilot jaisa ho.' pic.twitter.com/MHeEwE6u1b